ಶ್ರೀನಗರ: ಕಾಶ್ಮೀರ ಜನತೆ ಶುಕ್ರವಾರ ಮುಷ್ಕರ ನಡೆಸಬೇಕು ಎಂದು ನೀಡಿದ್ದ ಕರೆಗೆ ಪ್ರತ್ಯೇಕತಾವಾದಿ ನಾಯಕ ಸಯ್ಯದ್ ಅಲಿ ಗಿಲಾನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದರಿಂದ, ಅಬ್ದುಲ್ಲಾ ಗಿಲಾನಿ ನೇತೃತ್ವದ ಪಾಕಿಸ್ತಾನ ಮೂಲದ ಹುರಿಯತ್ ಸಂಘಟನೆಗೆ ಮುಜುಗರವಾಗಿದೆ. ಈ ಮುಷ್ಕರಕ್ಕೂ ತಮಗೂ ಸಂಬಂಧ ಇಲ್ಲ ಎಂದು ಸಯ್ಯದ್ ಅಲಿ ಗಿಲಾನಿ ತಿಳಿಸಿದ್ದಾರೆ.

ಇತ್ತೀಚೆಗೆ ಎನ್‌ಕೌಂಟರ್‌ಗಳಲ್ಲಿ ನಡೆದ ಹತ್ಯೆಯನ್ನು ಖಂಡಿಸಿ ಶುಕ್ರವಾರ ಮುಷ್ಕರಕ್ಕೆ ಕರೆ ನೀಡಲಾಗಿತ್ತು.

ಮುಷ್ಕರಕ್ಕೆ ಸಂಬಂಧಿಸಿದಂತೆ ಗಿಲಾನಿ ಅವರ ಹೆಸರಿನಲ್ಲಿ ಬರೆದಿರುವ ಪತ್ರವು ನಕಲಿಯಾಗಿದೆ. ಅಂತಹ ಯಾವುದೇ ಪತ್ರ ಬರೆದಿಲ್ಲ ಎಂದು ಗಿಲಾನಿ ಕುಟುಂಬ ತಿಳಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

‘ಮುಷ್ಕರದ ಬಗ್ಗೆ ಗಿಲಾನಿ ಅವರು ಯಾವುದೇ ಟ್ವೀಟ್ ಸಹ ಮಾಡಿಲ್ಲ. ಈ ಬಗ್ಗೆ ಅವರ ಕುಟುಂಬದ ಸದಸ್ಯರ ಜತೆ ಮಾತನಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ಹುರಿಯತ್ ಕಾನ್ಫೆರೆನ್ಸ್ ಅಧ್ಯಕ್ಷ ಸ್ಥಾನಕ್ಕೆ ಗಿಲಾನಿ ಅವರು ರಾಜೀನಾಮೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.