ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಲಭೆ ನಿಯಂತ್ರಿಸಲು ಫ್ರಾನ್ಸ್‌ಗೆ ಯೋಗಿಯನ್ನು ಕಳುಹಿಸಿ: ‘ಜರ್ಮನಿ ವೈದ್ಯ’ನ ಟ್ವೀಟ್‌

Published 1 ಜುಲೈ 2023, 16:29 IST
Last Updated 1 ಜುಲೈ 2023, 16:29 IST
ಅಕ್ಷರ ಗಾತ್ರ

ಲಖನೌ: ಗಲಭೆ ನಡೆಯುತ್ತಿರುವ ಫ್ರಾನ್ಸ್‌ಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಕಳುಹಿಸಿ ಎಂದು ಜರ್ಮನಿಯ ವೈದ್ಯರೊಬ್ಬರು ಟ್ವಿಟರ್‌ನಲ್ಲಿ ಸಲಹೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕಚೇರಿ, ‘ಯೋಗಿ ಮಾದರಿಯು ಜಗತ್ತಿನಾದ್ಯಂತ ಜನಪ್ರಿಯವಾಗಿರುವುದಕ್ಕೆ ಈ ಟ್ವೀಟ್‌ ಸಾಕ್ಷಿ’ ಎಂದು ಬಣ್ಣಿಸಿದೆ.

‘ಭಾರತವು ಯೋಗಿ ಅವರನ್ನು ಫ್ರಾನ್ಸ್‌ಗೆ ಕಳುಹಿಸಿದರೆ 24 ಗಂಟೆಗಳೊಳಗೆ ಹಿಂಸಾಚಾರವು ನಿಯಂತ್ರಣಕ್ಕೆ ಬರಲಿದೆ’ ಎಂದು ಜರ್ಮನಿಯ ಹೃದ್ರೋಗ ತಜ್ಞ ಎನ್ನಲಾದ ಪ್ರೊ. ಎನ್. ಜಾನ್ ಕ್ಯಾಮ್ ಟ್ವೀಟ್‌ ಮಾಡಿದ್ದರು.

ವಿರೋಧ ಪಕ್ಷಗಳ ನಾಯಕರು ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಎನ್. ಜಾನ್ ಕ್ಯಾಮ್ ಅವರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಇದೊಂದು ನಕಲಿ ಖಾತೆ ಇರಬಹುದು ಎಂದು ಶಂಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT