ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಗ್ರಹ ಬಳಸಿ ಶಿಕ್ಷಣ: ಇಸ್ರೊ ಜತೆ ಗೋವಾ ಸಿ.ಎಂ ಚರ್ಚೆ

Published 19 ಜನವರಿ 2024, 13:56 IST
Last Updated 19 ಜನವರಿ 2024, 13:56 IST
ಅಕ್ಷರ ಗಾತ್ರ

ಪಣಜಿ (ಪಿಟಿಐ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ನಿರ್ದೇಶಕ (ಸ್ಯಾಟ್‌ಕಾಂ– ಪೊ) ಹನುಮಂತರಾಯಪ್ಪ ಅವರನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಶುಕ್ರವಾರ ಭೇಟಿಯಾಗಿ, ರಾಜ್ಯದಲ್ಲಿ ಉಪಗ್ರಹ ಮೂಲಕ ಶಿಕ್ಷಣ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ.‌

‘ಹನುಮಂತರಾಯಪ್ಪ ಅವರನ್ನು ಭೇಟಿಯಾದ ಸಾವಂತ್‌ ಅವರು, ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಅನುಗುಣವಾಗಿ ಚಟುವಟಿಕೆ ಆಧಾರಿತ ಕಲಿಕೆಯಲ್ಲಿ ಇಸ್ರೊ ಸಹಯೋಗದೊಂದಿಗೆ ಉಪಗ್ರಹ ಮೂಲಕ ಶಿಕ್ಷಣ (ಎಜುಸ್ಯಾಟ್‌) ನೀಡುವ ಕುರಿತು ಚರ್ಚೆ ನಡೆಸಿದರು’ ಎಂದು ಗೋವಾ ಮುಖ್ಯಮಂತ್ರಿಗಳ ಕಚೇರಿ ವಕ್ತಾರರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT