ನವದೆಹಲಿ: ಹಿಂದುಜಾ ಸಮೂಹ ಮುಖ್ಯಸ್ಥರಾಗಿದ್ದ ಗೋಪಿಚಂದ್ ಪರಮಾನಂದ ಹಿಂದುಜಾ ಅವರು ಮಂಗಳವಾರ ಲಂಡನ್ನಲ್ಲಿ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಉದ್ಯಮ ವಲಯದಲ್ಲಿ ಜಿಪಿ ಎಂದೇ ಗುರುತಿಸಿಕೊಂಡಿದ್ದ ಗೋಪಿಚಂದ್ ಹಿಂದುಜಾ ಅವರು ಅನಾರೋಗ್ಯದ ಕಾರಣ ಕಳೆದ ಕೆಲವು ವಾರಗಳಿಂದ ಲಂಡನ್ನಲ್ಲಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಹಿಂದುಜಾ ಕುಟುಂಬದ ಎರಡನೇ ತಲೆಮಾರಿನವರಾಗಿದ್ದ ಗೋಪಿಚಂದ್ ಅವರು, ತಮ್ಮ ಸಹೋದರ ಶ್ರೀಚಂದ್ ಅವರು 2023ರ ಮೇ ಅಲ್ಲಿ ಮೃತಪಟ್ಟ ನಂತರ ಹಿಂದುಜಾ ಸಮೂಹದ ಮುಖ್ಯಸ್ಥರಾಗಿದ್ದರು.

ಗೋಪಿಚಂದ್ ಅವರು ತಮ್ಮ ಹೆಂಡತಿ ಸುನಿತಾ, ಮಗ ಸಂಜಯ್ ಹಾಗೂ ಧೀರಜ್ ಮತ್ತು ಮಗಳು ರಿತಾ ಅವರನ್ನು ಅಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.