ತಮ್ಮ ರಾಜ್ಯದ ರಾಜ್ಯಪಾಲರಿಂದ ‘ಶಿಷ್ಟಾಚಾರ ಉಲ್ಲಂಘನೆ’ ಆಗಿದೆ ಎಂದು ತಮಿಳುನಾಡು ಹಾಗೂ ಕೇರಳ ಸರ್ಕಾರಗಳು ಮಂಗಳವಾರ ಆರೋಪಿಸಿವೆ. ಇದರೊಂದಿಗೆ ದಕ್ಷಿಣದ ಈ ಎರಡು ರಾಜ್ಯಗಳ ಸರ್ಕಾರಗಳು ಹಾಗೂ ಅವುಗಳ ರಾಜ್ಯಪಾಲರ ನಡುವೆ, ವರ್ಷದ ಮೊದಲ ಅಧಿವೇಶದಿಂದಲೇ ಜಟಾಪಟಿ ಆರಂಭಗೊಂಡಂತಾಗಿದೆ. ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ರಾಜ್ಯಪಾಲ ಆರ್.ಎನ್.ರವಿ ಅವರು ಸದನ ಉದ್ದೇಶಿಸಿ ಭಾಷಣ ಮಾಡದೇ ಹೊರನಡೆದಿದ್ದಾರೆ. ರಾಜ್ಯಪಾಲ ರವಿ ಅವರ ಈ ನಡೆಯನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಖಂಡಿಸಿದ್ದಾರೆ. ಇತ್ತ, ‘ಸದನ ಉದ್ದೇಶಿಸಿ ಮಾತನಾಡುವ ವೇಳೆ, ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಭಾಷಣದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿದ್ದಾರೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ.
ಸದನ ಉದ್ದೇಶಿಸಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಾತನಾಡಿದರು ಪಿಟಿಐ ಚಿತ್ರ
ತಿರುವನಂತಪುರದಲ್ಲಿರುವ ವಿಧಾನಸಸೌದಲ್ಲಿ ನಡೆದ ಬಜೆಟ್ ಅಧಿವೇಶನದ ಮೊದಲ ದಿನದ ಕಲಾಪ ಉದ್ದೇಶಿಸಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಮಂಗಳವಾರ ಮಾತನಾಡಿದರು ಪಿಟಿಐ ಚಿತ್ರ
ವರ್ಷದ ಆರಂಭದಲ್ಲಿ ನಡೆಯುವ ವಿಧಾನಸಭೆ ಅಧಿವೇಶನ ವೇಳೆ ಸದನ ಉದ್ಧೇಶಿಸಿ ರಾಜ್ಯಪಾಲರು ಭಾಷಣ ಮಾಡುವುದನ್ನು ಕಡ್ಡಾಯಗೊಳಿಸಿರುವ ಅವಕಾಶಗಳನ್ನು ಸಂವಿಧಾನದಿಂದ ತೆಗೆದುಹಾಕಬೇಕು. ಈ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತರುವುದಕ್ಕಾಗಿ ಡಿಎಂಕೆ ಪಕ್ಷ ಪ್ರಯತ್ನಿಸಲಿದೆ
ಎಂ.ಕೆ.ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿ
ರಾಜ್ಯದ ಕೆಲ ಜ್ವಲಂತ ಸಮಸ್ಯೆಗಳ ಕುರಿತು ಸರ್ಕಾರದ ಬಳಿ ಉತ್ತರ ಇಲ್ಲ. ಹೀಗಾಗಿ ಜನರ ಗಮನವನ್ನು ಬೇರೆಡೆ ಸೆಳೆಯುವುದಕ್ಕೆ ರಾಜ್ಯಪಾಲ ಮತ್ತು ಸರ್ಕಾರ ನಡುವೆ ಬಿಕ್ಕಟ್ಟು ತಲೆದೋರಿದೆ ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ