ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಾಕ್ರಮ ದಿವಸ್‌ ಆಗಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಜಯಂತಿ ಆಚರಣೆ

Last Updated 19 ಜನವರಿ 2021, 12:03 IST
ಅಕ್ಷರ ಗಾತ್ರ

ನವದೆಹಲಿ: ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ ಜಯಂತಿ ದಿನವಾದ ಜನವರಿ 23 ಇನ್ನು ‘ಪರಾಕ್ರಮ ದಿವಸ್‌’ ಆಗಿ ಆಚರಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದಸಿಂಗ್ ಪಟೇಲ್‌ ಮಂಗಳವಾರ ತಿಳಿಸಿದರು.

ಬೋಸ್ ಅವರ 125ನೇ ಜಯಂತಿ ದಿನವಾದ 23ರಂದು ಪ್ರಥಮ ‘ಪರಾಕ್ರಮ ದಿವಸ್’ ಕಾರ್ಯಕ್ರಮ ಕೋಲ್ಕತ್ತದಲ್ಲಿ ನಡೆಯಲಿದೆ. ಇದರಲ್ಲಿ ಪ್ರಧಾನಿ ಭಾಗವಹಿಸಲಿದ್ದು, ವಸ್ತು ಪ್ರದರ್ಶನ ಉದ್ಘಾಟಿಸುವರು ಎಂದರು.

ಪಶ್ಚಿಮ ಬಂಗಾಳದ ಸುಮಾರು 200 ಮಂದಿ ಕಲಾವಿದರು 400 ಮೀಟರ್ ಉದ್ದದ ಕ್ಯಾನ್ವಾಸ್‌ ಮೇಲೆ ಬೋಸ್ ಅವರ ಜೀವನ ಬಿಂಬಿಸುವ ಚಿತ್ರಣ ಬಿಡಿಸುವರು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT