ನವೆದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಡಳಿತದಲ್ಲಿ ಕಾರ್ಪೋರೇಟ್‌ಗಿಂತ ಜನ ಸಾಮಾನ್ಯರ ಮೇಲೆ ಜಾಸ್ತಿ ತೆರಿಗೆ ಹೇರಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಆರೋಪಿಸಿದ್ದಾರೆ.

ಕೇಂದ್ರವನ್ನು ಲೂಟಿ ಸರ್ಕಾರ ಎಂದು ಟೀಕಿಸಿರುವ ರಾಹುಲ್, ಕಾರ್ಪೋರೇಟ್ ಮಿತ್ರರ ಪರವಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ಗೋಧಿ ಆಮದು ಮಾಡಿಕೊಳ್ಳುವ ಯೋಚನೆ ಇಲ್ಲ: ಸರ್ಕಾರದ ಮೂಲಗಳ ಮಾಹಿತಿ

ಕಾರ್ಪೋರೇಟ್‌ಗಳಿಗೆ ತೆರಿಗೆ ಕಡಿತಗೊಳಿಸಿರುವ ಮೋದಿ ಸರ್ಕಾರವು, ಜನರಿಂದ ಜಾಸ್ತಿ ತೆರಿಗೆ ವಸೂಲಿ ಮಾಡುತ್ತಿದೆ ಎಂಬುದನ್ನುಇನ್ಪೋಗ್ರಾಫಿಕ್ಸ್ ಸಹಿತ ಮಾಹಿತಿ ಹಂಚಿದ್ದಾರೆ.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನ ಸಾಮಾನ್ಯರು ಹಾಗೂ ಕಾರ್ಪೋರೇಟ್‌ಗಳಿಗೆ ವಿಧಿಸಲಾಗಿರುವ ತೆರಿಗೆಯಿಂದ ಸಂಗ್ರಹವಾದ ಶೇಕಡವಾರು ಆದಾಯವನ್ನು ಹೋಲಿಕೆ ಮಾಡಲಾಗಿದೆ.

ಕೇಂದ್ರ ಸರ್ಕಾರದ ಬಜೆಟ್ ದಾಖಲೆಯ ಆಧಾರದಲ್ಲಿ ರಾಹುಲ್ ಗಾಂಧಿ, ಈ ಮಾಹಿತಿ ಹಂಚಿದ್ದಾರೆ.

ಮೋದಿ ಆಡಳಿತದಲ್ಲಿ ಕಾರ್ಪೋರೇಟ್‌ಗಿಂತಲೂ ಹೆಚ್ಚು ತೆರಿಗೆಯನ್ನು ಜನರ ಮೇಲೆ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

2010ರಲ್ಲಿ ಕಾರ್ಪೋರೇಟ್‌ಗಳಿಂದ ಶೇ 40 ಮತ್ತು ಜನರ ಮೇಲಿನ ತೆರಿಗೆಯಿಂದ ಶೇ 24ರಷ್ಟು ಆದಾಯ ಸಂಗ್ರಹಿಸಲಾಗಿತ್ತು. 2021ರಲ್ಲಿ ಕಾರ್ಪೋರೇಟ್‌ಗಳ ಮೇಲಿನ ತೆರಿಗೆಯಿಂದ ಸಂಗ್ರಹಿಸಲಾದ ಆದಾಯವು ಶೇ 24ಕ್ಕೆ ಇಳಿಕೆಯಾಗಿದೆ. ಅದೇ ಹೊತ್ತಿಗೆ ಜನ ಸಾಮಾನ್ಯರ ಮೇಲಿನ ತೆರಿಯಿಂದ ಸಂಗ್ರಹಿಸಲಾದ ಆದಾಯವು ಶೇ 48ಕ್ಕೆ ಏರಿಕೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.