ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಗೇರಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಕೇಂದ್ರ ಬದ್ಧ- ಸಚಿವ ಪುರಿ

Last Updated 12 ಡಿಸೆಂಬರ್ 2022, 11:09 IST
ಅಕ್ಷರ ಗಾತ್ರ

ನವದೆಹಲಿ: ನಗರದ ಕೊಳೆಗೇರಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಕೇಂದ್ರ ಬದ್ಧವಾಗಿದೆ. ಪ್ರತಿ ಎಕರೆಯಲ್ಲಿ ಒಂದು ‘ಜುಗ್ಗಿ’ (ಕಚ್ಚಾ ಮನೆ ನಿರ್ಮಿಸುವ ಸ್ಥಳ) ಸ್ಥಳವನ್ನು ಅವರಿಗಾಗಿ ಮೀಸಲಿಡಲಾಗಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್ದೀಪ್‌ ಸಿಂಗ್‌ ಪುರಿ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದರು.

ಪ್ರಶ್ನೋತ್ತರದ ಪೂರಕ ಅವಧಿಯಲ್ಲಿ ಉತ್ತರಿಸಿದ ಅವರು, ಕೇಂದ್ರ ಈಗಾಗಲೇ ಅರ್ಹರಿಗೆ ಪರ್ಯಾಯ ವಸತಿ ಕಲ್ಪಸಿದೆ. ಕೆಲವರಷ್ಟೇ ಈ ವಸತಿ ಪ್ರದೇಶವನ್ನು ಪಡೆದುಕೊಂಡಿದ್ದು, ಹಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದರು.

2017ರ ರಾಷ್ಟ್ರೀಯ ರಾಜಧಾನಿ ನೀತಿಯನ್ನು ಅನುಸರಿಸಿ ಕೊಳೆಗೇರಿ ನಿವಾಸಿಗಳಿಗೆ ವಸತಿ ಕಲ್ಪಿಸಲಾಗುತ್ತಿದೆ. ಅಲ್ಲದೆ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆಂದೇ 100 ಫ್ಲ್ಯಾಟ್‌ಗಳನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರದಿಂದ ಖರೀದಿಸಲಾಗಿದೆ. ಕೇಂದ್ರ ಸರ್ಕಾರ ಸರ್ವೇ ನಡೆಸಿ ಹೊಸ ಮಾದರಿಯಲ್ಲಿ ಮನೆಗಳನ್ನು ರೂಪಿಸಿ ಕೊಡಲಿದೆ, ಆದರೆ ಸ್ಥಳಾಂತರಿಸುವುದಿಲ್ಲ ಎಂದು ಅವರು ಹೇಳಿದರು.

ಈಗಾಗಲೇ ಒಟ್ಟು 370 ಕ್ಲಸ್ಟರ್‌ಗಳಲ್ಲಿ 210 ಪ್ರದೇಶಗಳ ಸರ್ವೇ ಮಾಡಲಾಗಿದೆ. ಇತ್ತೀಚೆಗೆ ಕಲ್ಕಾಜಿಯಲ್ಲಿ ಪ್ರಧಾನಿಯವರು ಹೊಸದಾಗಿ 3000 ಸಾವಿರ ಫ್ಲ್ಯಾಟ್‌ಗಳನ್ನು ಮಂಜೂರು ಮಾಡಿದ್ದಾರೆ. ಇನ್ನೂ ಎರಡು ಯೋಜನೆಗಳು ಸಿದ್ಧವಾಗಿವೆ. ಹೀಗಾಗಿ ಪುನರ್ವಸತಿಗೆ ಕೇಂದ್ರ ಸಿದ್ಧವಾಗಿದೆ ಎಂದು ರಾಜ್ಯ ಸಭೆಯಲ್ಲಿ ಅವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT