ದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡ 3ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ.

ಸದ್ಯ ಶೇ 28ರಷ್ಟು ತುಟ್ಟಿ ಭತ್ಯೆ ನೀಡಲಾಗುತ್ತಿದ್ದು, ಹೊಸ ಆದೇಶದಂತೆ ಅದು ಶೇ 31ಕ್ಕೆ ಏರಿಕೆಯಾಗಲಿದೆ.ಜುಲೈ 1ರಿಂದ ಆದೇಶ ಪೂರ್ವಾನ್ವಯವಾಗಲಿದೆ ಎಂದು ಸರ್ಕಾರ ತಿಳಿಸಿದೆ.

47.14 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಇದರ ಲಾಭ ದೊರೆಯಲಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಸರ್ಕಾರದ ತೀರ್ಮಾನವನ್ನು ಗುರುವಾರ ಘೋಷಿಸಿದರು. ತುಟ್ಟಿಭತ್ಯೆ ಹೆಚ್ಚಿಸುವ ಈ ನಿರ್ಧಾರದಿಂದ ಸರ್ಕಾರಕ್ಕೆ ವಾರ್ಷಿಕ ₹9,488 ಕೋಟಿ ಹೊರೆ ಉಂಟಾಗಲಿದೆ ಎಂದು ಅವರು ಹೇಳಿದರು.

ಈ ಮೊದಲು ಜುಲೈನಲ್ಲಿ ಸರ್ಕಾರ ತುಟ್ಟಿ ಭತ್ಯೆಯನ್ನು ಶೇ .17 ರಿಂದ ಶೇ .28 ಕ್ಕೆ ಹೆಚ್ಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.