ಅಹಮದಾಬಾದ್ (ಪಿಟಿಐ): ಪ್ರವಾದಿ ಮಹಮ್ಮದ್ ಅವರಿಗೆ ಅವಮಾನ ಮಾಡಿದ್ದರು ಎನ್ನಲಾದ ವ್ಯಕ್ತಿಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪದಡಿ 22 ವರ್ಷದ ಟೈಲರ್ ಒಬ್ಬರನ್ನು ಗುಜರಾತ್ನ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಆರೋಪಿ ಫೈಜಾನ್ ಶೇಕ್ ಅವರನ್ನು ಎಟಿಎಸ್ ಅಧಿಕಾರಿಗಳು ಭಾನುವಾರ ಬಂಧಿಸಿದ್ದು, ಪಿಸ್ತೂಲ್ ಹಾಗೂ 6 ಸಜೀವ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

‘ಆರೋಪಿಯು ಉತ್ತರಪ್ರದೇಶದ ರಾಮಪುರ ಜಿಲ್ಲೆಯ ದುಂಡವಾಲ ನಿವಾಸಿಯಾಗಿದ್ದು, ಗುಜರಾತ್ನ ನವಸಾರಿ ಜಿಲ್ಲೆಯ ಛೌರ್ಪೌಲ್ನಲ್ಲಿ ನೆಲಸಿದ್ದ. ಪ್ರವಾದಿ ಅವರನ್ನು ವ್ಯಕ್ತಿಗಳನ್ನು ನಿಂದಿಸುವುದನ್ನು ಕಂಡ ತಕ್ಷಣವೇ ತನ್ನ ಸಹಚರರ ಜೊತೆಗೂಡಿ ಅಂತಹ ವ್ಯಕ್ತಿಗಳನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದ’ ಎಂದು ಭಯೋತ್ಪಾದನಾ ನಿಗ್ರಹ ಪಡೆಯ ಡಿಐಜಿ ಸುನಿಲ್ ಜೋಶಿ ತಿಳಿಸಿದ್ದಾರೆ.

‘ಶೇಕ್ ಹಾಗೂ ಮತ್ತೊಬ್ಬ ಆರೋಪಿ ಮೊಹಮ್ಮದ್ ಅಬು ಬಕಾರ್ ಸೇರಿಕೊಂಡು ನಿರ್ದಿಷ್ಟ ಸಮುದಾ0ಯದ ವ್ಯಕ್ತಿಗಳ ಹತ್ಯೆಗೆ ಸಂಚು ರೂಪಿಸಿದ್ದರು. ಈ ಪಿತೂರಿಯಲ್ಲಿ ಜನರನ್ನು ಶಸ್ತ್ರಾಸ್ತ್ರ ದಂಗೆಗೆ ಪ್ರಚೋದಿಸುವ ಜೊತೆಗೆ ಜಮ್ಮು ಮತ್ತು ಕಾಶ್ಮೀರ, ಲಡಾಕ್ ಅನ್ನು ಭಾರತದಿಂದ ಬೇರ್ಪಡಿಸುವ ಜಿಹಾದ್ ನಡೆಸಲೂ ಸಂಚು ರೂಪಿಸಿದ್ದರು’ ಎಂದು ಜೋಶಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.