ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ : ಗೂಡ್ಸ್‌ ರೈಲು ಡಿಕ್ಕಿಯಾಗಿ ಗಂಡು ಸಿಂಹ ಸಾವು

Published 21 ಜುಲೈ 2023, 10:38 IST
Last Updated 21 ಜುಲೈ 2023, 10:38 IST
ಅಕ್ಷರ ಗಾತ್ರ

ಅಮ್ರೇಲಿ : ಗೂಡ್ಸ್‌ ರೈಲು ಡಿಕ್ಕಿಯಾಗಿ ಗಂಡು ಸಿಂಹವೊಂದು ಸಾವನ್ನಪ್ಪಿದ್ದು ಮತ್ತೊಂದು ಸಿಂಹ ಗಾಯಗೊಂಡ ಘಟನೆ ಜಿಲ್ಲೆಯ ಉಚ್ಚಾಯಿ ಗ್ರಾಮದ ಬಳಿ  ಶುಕ್ರವಾರ ಬೆಳಿಗ್ಗೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಹಳಿಯ ಬಳಿ 4 ಸಿಂಹಗಳಿದ್ದವು. ಈ ಬಗ್ಗೆ ರೈಲ್ವೇ ಸೇವಕ್‌, ಲೊಕೊ ಪೈಲಟ್‌ಗೆ ಮಾಹಿತಿ ನೀಡಿದ್ದು, ತಕ್ಷಣ ತುರ್ತು ಬ್ರೇಕ್‌ ಹಾಕಲಾಗಿದ್ದರೂ, ಒಂದು ಗಂಡು ಸಿಂಹ ಹಳಿಯ ಮೇಲೆ ಬಂದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದೆ. ಸಿಂಹ ತೀರಾ ಹತ್ತಿರದಲ್ಲಿದ್ದ ಕಾರಣ ರೈಲನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡಿರುವ ಸಿಂಹವನ್ನು ಚಿಕಿತ್ಸೆಗಾಗಿ ಸಕರ್‌ಬಾಗ್‌ ಮೃಗಾಲಯಕ್ಕೆ ಕರೆದೊಯ್ಯಲಾಗಿದೆ ಎಂದು ಆರ್‌ಎಫ್‌ಒ ತಿಳಿಸಿದ್ದಾರೆ.

ಹಳಿಗಳನ್ನು ಸರಿಪಡಿಸುವ ಕಾರ್ಯ ಆರಂಭಿಸಲಾಗಿದೆ. ಜತೆಗೆ ಸಿಂಹಗಳ ಓಡಾಟದ ಬಗ್ಗೆ ನಿಗಾ ಇಡುವಂತೆ ರೈಲ್ವೆ ಸೇವಕ್‌ಗೆ ತಿಳಿಸಲಾಗಿದೆ ಎಂದು ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

ಪಿಪವಾವ್‌ ಮತ್ತು ರಜುಲಾ ನಗರ ನಡುವಿನ  ರೈಲು ದಾರಿ 35 ಕಿಮೀ ಇದೆ. ಇದರ ಬಳಿ ಇರುವ ಗಿರ್‌ ಅರಣ್ಯ ಏಷ್ಯಾದ ಸಿಂಹಗಳಿರುವ ಪ್ರಪಂಚದ ಕೊನೆಯ ವಾಸಸ್ಥಾನವಾಗಿದೆ. ಇದು ಶತ್ರುಂಜಿ ಅರಣ್ಯ ವಿಭಾಗಕ್ಕೆ ಸೇರಿದ್ದಾಗಿದೆ. ಇಲ್ಲಿ ಹಲವು ಕಾಲದಿಂದ ಸಿಂಹಗಳು ವಾಸವಿದ್ದು, ಅವು ರೈಲು ಹಳಿಯನ್ನು ದಾಟಿ ಸಾಗುತ್ತವೆ ಎಂದು ವಿಭಾಗೀಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT