ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UNESCO: ಸೃಜನಶೀಲ ನಗರಗಳ ಪಟ್ಟಿಗೆ ಗ್ವಾಲಿಯರ್‌, ಕೋಯಿಕ್ಕೋಡ್‌ ಸೇರ್ಪಡೆ

Published 1 ನವೆಂಬರ್ 2023, 14:40 IST
Last Updated 1 ನವೆಂಬರ್ 2023, 14:40 IST
ಅಕ್ಷರ ಗಾತ್ರ

ನವದೆಹಲಿ: ಯುನೆಸ್ಕೊ ಸಿದ್ಧಪಡಿಸಿರುವ ವಿಶ್ವದ ಸೃಜನಶೀಲ ನಗರಗಳ ಪಟ್ಟಿಗೆ ಮಧ್ಯಪ್ರದೇಶದ ಗ್ವಾಲಿಯರ್‌ ಹಾಗೂ ಕೇರಳದ ಕೋಯಿಕ್ಕೋಡ್‌ ಸೇರ್ಪಡೆಯಾಗಿವೆ.

ವಿಶ್ವ ನಗರಗಳ ದಿನಾಚರಣೆ ಅಂಗವಾಗಿ ಸಿದ್ಧಪಡಿಸಿರುವ ವಿಶ್ವದ ಸೃಜನಶೀಲ 55 ನಗರಗಳ ಪಟ್ಟಿಯಲ್ಲಿ ಭಾರತದ ಈ ಎರಡೂ ಸೇರಿವೆ. ಈ ಬಗ್ಗೆ ತನ್ನ ವೆಬ್‌ಸೈಟ್‌ನಲ್ಲಿ ಯುನೆಸ್ಕೊ ಮಂಗಳವಾರ ಅಧಿಕೃತವಾಗಿ ಪ್ರಕಟಿಸಿದೆ.

ಜಾಗತಿಕ ವೇದಿಕೆಯಲ್ಲಿ ಭಾರತೀಯ ಸಂಸ್ಕೃತಿಯು ಅನುರಣಿಸಿರುವುದು ಹೆಮ್ಮೆಯ ಸಂಗತಿ. ಈ ಸಾಧನೆಗೆ ಕಾರಣರಾದ ಎರಡೂ ನಗರಗಳ ನಾಗರಿಕರು ಅಭಿನಂದನೆಗೆ ಅರ್ಹರಾಗಿದ್ದಾರೆ.
ನರೇಂದ್ರ ಮೋದಿ, ಪ್ರಧಾನಿ

ಸಂಗೀತ ವಿಭಾಗದಲ್ಲಿ ಗ್ವಾಲಿಯರ್‌ ಸೇರ್ಪಡೆಯಾದರೆ, ಸಾಹಿತ್ಯ ಕ್ಷೇತ್ರದಲ್ಲಿ ಕೋಯಿಕ್ಕೋಡ್‌ಗೆ ಈ ಮಾನ್ಯತೆ ಸಿಕ್ಕಿದೆ.

‘ಸಾಹಿತ್ಯ ಹಾಗೂ ಸೃಜನಶೀಲತೆಯು ಈ ನಗರಗಳ ಅಭಿವೃದ್ಧಿಯ ಕಾರ್ಯತಂತ್ರದ ಭಾಗವಾಗಿವೆ. ಮಾನವ ಕೇಂದ್ರಿತ ನಗರಾಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿಯೂ ನಾವೀನ್ಯದ ಹೊಸ ಪರಿಪಾಠಕ್ಕೂ ಮುನ್ನುಡಿ ಬರೆದಿವೆ’ ಎಂದು ಯುನೆಸ್ಕೊ ಪ್ರಕಟಣೆ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT