ಹಿಸಾರ್: ಪ್ರಸಿದ್ಧ ಹರಿಯಾಣ್ವಿ ಗಾಯಕ ರಾಜು ಪಂಜಾಬಿ (33) ಅವರು ಹರಿಯಾಣಾದ ಹಿಸಾರ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಂಗಳವಾರ ನಿಧನರಾದರು.
ಕಾಮಾಲೆಯಿಂದ ಬಳಲುತ್ತಿದ್ದ ಅವರಿಗೆ ಕಳೆದ 10 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ರಾಜು ಅವರ ಅಂತಿಮ ಸಂಸ್ಕಾರವನ್ನು ರಾಜಸ್ಥಾನದಲ್ಲಿಯ ಅವರ ಸ್ವಗ್ರಾಮ ರಾವಸ್ತಾರ್ ಖೇಡಾದಲ್ಲಿ ನಡೆಸಲಾಗುವುದು ಎನ್ನಲಾಗಿದೆ.
ರಾಜು ಅವರು ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅವರ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು, ಸಂಬಂಧಿಕರು ಹಿಸಾರ್‌ಗೆ ದೌಡಾಯಿಸಿದರು.
‘ಸಾಲಿಡ್ ಬಾಡಿ’, ‘ತು ಚೀಝ್ ಲಜ್ವಾಬ್’ ಮತ್ತು ‘ದೇಸಿ– ದೇಸಿ’ ಅವರ ಪ್ರಮುಖ ಗೀತೆಗಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.