ಮುಂಬೈ: ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಆರ್‌ಪಿಐ (ಎ) ಪಕ್ಷವು 8 ರಿಂದ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿದೆ ಎಂದು ಬಿಜೆಪಿ ಹಿರಿಯ ನಾಯಕರಿಗೆ ತಿಳಿಸಲಾಗಿದೆ ಎಂದು ಕೇಂದ್ರ ಸಚಿವ ರಾಮದಾಸ್ ಅಠವಾಳೆ ಮಂಗಳವಾರ ಹೇಳಿದರು.
ಆರ್‌ಪಿಐ(ಎ) ಪಕ್ಷವು ಬಿಜೆಪಿ ಶಿವಸೇನೆ (ಶಿಂದೆ ಬಣ) ಎನ್‌ಸಿಪಿ (ಅಜಿತ್ ಪವಾರ್ ಬಣ)ಗಳನ್ನು ಒಳಗೊಂಡ ‘ಮಹಾಯುತಿ’ಯ ಭಾಗವಾಗಿದೆ.
‘ಸೀಟು ಹಂಚಿಕೆ ಕುರಿತಂತೆ ಮಾತುಕತೆ ನಡೆಯುತ್ತಿದೆ. ಬಿಜೆಪಿಯ ಮಹಾರಾಷ್ಟ್ರ ಚುನಾವಣಾ ಉಸ್ತುವಾರಿ ಭೂಪೇಂದ್ರ ಯಾದವ್ ಅವರೊಂದಿಗೆ ಪಕ್ಷದ ಬೇಡಿಕೆಗಳ ಬಗ್ಗೆ ಚರ್ಚಿಸಿದ್ದೇನೆ’ ಎಂದು ಹೇಳಿದರು.
‘ಮೈತ್ರಿಯ ಪಾಲುದಾರ ಪಕ್ಷಗಳ ಮೇಲೆ ವಿಶ್ವಾಸ ಇದೆ. ಆರ್‌ಪಿಐ(ಎ) ಪ್ರತ್ಯೇಕ ವೋಟ್‌ಬ್ಯಾಂಕ್ ಹೊಂದಿದೆ. ದಲಿತ ಸಮುದಾಯದ ಹಲವು ಜನರು ಪಕ್ಷದೊಂದಿಗಿದ್ದಾರೆ’ ಎಂದರು.