ಶಾಜಿಯಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮನಪ್ರೀತ್ ಪಿ.ಎಸ್. ಅರೋರಾ ಅವರು, ಈ ಮಧ್ಯಂತರ ಆದೇಶ ನೀಡಿದರು. ಟಿ.ವಿ. ಚರ್ಚೆಯ ಕಾರ್ಯಕ್ರಮ ಮುಗಿದ ನಂತರವೂ, ಚರ್ಚೆಯಲ್ಲಿ ಭಾಗವಹಿಸುವುದಕ್ಕೆ ನೀಡಿದ್ದ ಸಮ್ಮತಿಯನ್ನು ತಾವು ಹಿಂಪಡೆದ ನಂತರವೂ ತಮ್ಮ ಮಾತುಗಳನ್ನು ಚಿತ್ರೀಕರಿಸಿಕೊಳ್ಳುವ ಮೂಲಕ ಕ್ಯಾಮೆರಾಮನ್ ತಮ್ಮ ಮಾನಹಾನಿಗೆ ಕಾರಣರಾಗಿದ್ದಾರೆ, ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ ಎಂದು ಶಾಜಿಯಾ ಅವರು ದೂರಿದ್ದಾರೆ.