ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಣಿಗೆ ಸಂಗ್ರಹಿಸಲು ಪ್ರಧಾನಿ ಚಿತ್ರ: FIR ರದ್ದತಿಗೆ ದೆಹಲಿ ಹೈಕೋರ್ಟ್ ನಕಾರ

Published 16 ಏಪ್ರಿಲ್ 2024, 13:54 IST
Last Updated 16 ಏಪ್ರಿಲ್ 2024, 13:54 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಗೂ ಅವರ ಉಪನಾಮವನ್ನು ಬಳಸಿಕೊಂಡು ತನ್ನ ಎನ್‌ಜಿಒಗೆ ದೇಣಿಗೆ ಕೊಡುವಂತೆ ಸಾರ್ವಜನಿಕರಿಗೆ ಅಪ್ರಾಮಾಣಿಕವಾಗಿ ಪ್ರಲೋಭನೆ ಒಡ್ಡಿದ ಆರೋಪ ಎದುರಿಸುತ್ತಿರುವ ಪವನ್ ಪಾಂಡೆ ಎನ್ನುವವರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.

ಆರೋಪಿಯು ಗಂಭೀರ ಸ್ವರೂಪದ ಅಪರಾಧ ಎಸಗಿರುವುದನ್ನು ಎಫ್‌ಐಆರ್ ತೋರಿಸುತ್ತಿದೆ. ಎಲ್ಲ ಆಯಾಮಗಳ ಬಗ್ಗೆ ತನಿಖೆ ನಡೆಸುವ ಹೊಣೆ ಹಾಗೂ ಹಕ್ಕು ಪೊಲೀಸರಿಗೆ ಇದೆ ಎಂದು ಕೋರ್ಟ್ ಹೇಳಿದೆ.

‘ಅರ್ಜಿದಾರರು ದೇಶದ ಗೌರವಾನ್ವಿತ ಪ್ರಧಾನಿಯ ಉಪನಾಮವನ್ನು ಬಳಸಿಕೊಂಡು ದೇಣಿಗೆ ಸಂಗ್ರಹಿಸುತ್ತಿದ್ದಾರೆ ಎಂಬ ಆರೋಪ ಇದೆ. ಅರ್ಜಿದಾರರ ಉಪನಾಮ ಮೋದಿ ಅಲ್ಲ. ಅಲ್ಲದೆ, ಪ್ರಧಾನಿಯವರ ಭಾವಚಿತ್ರವನ್ನು ಕೂಡ ಬಳಸಿಕೊಳ್ಳಲಾಗಿದೆ’ ಎಂದು ನ್ಯಾಯಮೂರ್ತಿ ಅಮಿತ್ ಮಹಾಜನ್ ಅವರು ಕಳೆದ ತಿಂಗಳು ಹೊರಡಿಸಿರುವ ಆದೇಶದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT