ನವದೆಹಲಿ: ‘ಇಂತಹ ಕಷ್ಟದ ಸಮಯದಲ್ಲಿ ನನ್ನ ತಾಯಿಯನ್ನು ನೋಡಲು, ಆಕೆಯನ್ನು ಅಪ್ಪಿಕೊಳ್ಳಲು ಆಗದೆ ಸ್ಥಿತಿಯಲ್ಲಿ ಇದ್ದೇನೆ‘ ಎಂದು ಮಾಜಿ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಪುತ್ರಿ ಸೈಮಾ ವಾಝೆದ್ ತಮ್ಮ ಆಳಲನ್ನು ತೋಡಿಕೊಂಡಿದ್ದಾರೆ.
‘ಬಾಂಗ್ಲಾದಲ್ಲಿ ಉಂಟಾದ ಅರಾಜಕತೆಯಿಂದಾಗಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಾನು ಪ್ರೀತಿಸುವ ದೇಶದಲ್ಲಿ ಇಷ್ಟೊಂದು ಸಾವು– ನೋವು ಸಂಭವಿಸಿರುವುದು ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ಇದೊಂದು ಹೃದಯ ವಿದ್ರಾವಕ ಘಟನೆಯಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ತಾಯಿಯನ್ನು ನೋಡಲಾರದೆ, ಆಕೆಯೊಂದಿಗೆ ಸಮಯ ಕಳೆಯಲು ಆಗದೆ ನೋವು ಅನುಭವಿಸುತ್ತಿದ್ದೇನೆ‘ ಎಂದು ಸೈಮಾ ‘ಎಕ್ಸ್‘ನಲ್ಲಿ ತಿಳಿಸಿದ್ದಾರೆ.
ಸೈಮಾ ಅವರು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕರಾಗಿದ್ದಾರೆ.
ಮೀಸಲಾತಿ ವಿರೋಧಿಸಿ ಬಾಂಗ್ಲಾದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ 400ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಪ್ರತಿಭಟನಾಕಾರರು ಢಾಕಾದಲ್ಲಿರುವ ಪ್ರಧಾನಿ ತಂಗುವ ಅರಮನೆಗೆ ನುಗ್ಗಿದ್ದರು. ದೇಶದಲ್ಲಿ ಸೃಷ್ಟಿಯಾದ ಅರಾಜಕತೆಗೆ ನಲುಗಿದ ಶೇಖ್ ಹಸೀನಾ ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ದೇಶದಿಂದಲೇ ಪಲಾಯನ ಮಾಡಿದ್ದಾರೆ.
ಬಾಂಗ್ಲಾ ಸ್ವಾತಂತ್ರ್ಯ ಸಮರದಲ್ಲಿ ಭಾಗಿಯಾಗಿದ್ದವರ ಸಂಬಂಧಿಕರಿಗೆ ಸರ್ಕಾರದ ಹುದ್ದೆಗಳಲ್ಲಿ ಶೇ 30ರಷ್ಟು ಮೀಸಲಾತಿ ಕಲ್ಪಿಸುವ ವಿವಾದಾತ್ಮಕ ಮೀಸಲು ವ್ಯವಸ್ಥೆಯನ್ನು ಕೊನೆಗೊಳಿಸಬೇಕು ಎಂಬುದು ಪ್ರತಿಭಟನಕಾರರ ಬೇಡಿಕೆಯಾಗಿದೆ.
Heartbroken with the loss of life in my country 🇧🇩 that I love. So heartbroken that I cannot see and hug my mother during this difficult time. I remain committed to my role as RD @WHOSEARO @WHO #HealthForAll #OneWHO
— Saima Wazed (@drSaimaWazed) August 8, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.