ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆಯಲ್ಲಿ ‘ರಾಗ ಸೇವೆ’: ಹೇಮಾ ಮಾಲಿನಿ ಸೇರಿ 100ಕ್ಕೂ ಅಧಿಕ ಕಲಾವಿದರು ಭಾಗಿ

Published 26 ಜನವರಿ 2024, 10:28 IST
Last Updated 26 ಜನವರಿ 2024, 10:28 IST
ಅಕ್ಷರ ಗಾತ್ರ

ಅಯೋಧ್ಯೆ: ಬಾಲಿವುಡ್‌ನ ಹಿರಿಯ ನಟಿ ಹೇಮಾ ಮಾಲಿನಿ, ಮಾಲಿನಿ ಅವಸ್ಥಿ, ಅನೂಪ್ ಜಲೋಟಾ, ಅನುರಾಧಾ ಪದುವಾಳ್ ಮತ್ತು ಸೋನಲ್ ಮಾನ್‌ಸಿಂಗ್ ಸೇರಿದಂತೆ ಹಲವು ಕಲಾವಿದರು ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ರಾಮ ದೇಗುಲದಲ್ಲಿ ಶ್ರೀರಾಮ ‘ರಾಗ ಸೇವೆ’ ನೆರವೇರಿಸಲಿದ್ದಾರೆ.

ಭಗವಂತ ರಾಮನಿಗಾಗಿ ನಡೆಯುತ್ತಿರುವ 45 ದಿನಗಳ ಭಕ್ತಿಗೀತೆಗಳ ಸಂಗೀತೋತ್ಸವ ಇಂದಿನಿಂದ ಆರಂಭಗೊಳ್ಳಲಿದೆ.

‘ಜನವರಿ 26ರಿಂದ ಶ್ರೀರಾಮ ಜನ್ಮಭೂಮಿ ದೇವಾಲಯದಲ್ಲಿ ಸಾಂಪ್ರದಾಯಿಕ ರಾಗ ಸೇವೆಯನ್ನು ಆಯೋಜಿಸಲಾಗಿದ್ದು, ಭಗವಂತ ರಾಮನ ಎದುರು ಗುಡಿ ಮಂಟಪದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ದೇಶದ ವಿವಿಧ ಪ್ರದೇಶಗಳು ಮತ್ತು ವಿಭಿನ್ನ ಕಲಾ ಪ್ರಕಾರಗಳಲ್ಲಿ ಪರಿಣಿತರಾದ 100ಕ್ಕೂ ಅಧಿಕ ಕಲಾವಿದರು ಮುಂದಿನ 45 ದಿನಗಳ ಕಾಲ ರಾಗ ಸೇವೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರೊಬ್ಬರು ಹೇಳಿದ್ದಾರೆ.

ಗುಡಿ ಮಂಟಪವು ಶ್ರೀರಾಮನನ್ನು ಪ್ರತಿಷ್ಠಾಪನೆ ಮಾಡಲಾಗಿರುವ ದೇಗುಲದ ಗರ್ಭ ಗುಡಿಯ ಮುಂಭಾಗದಲ್ಲಿದೆ. ‘ರಾಗ ಸೇವೆ’ ಎಂಬುದು ನಮ್ಮ ಶಾಸ್ತ್ರೀಯ ಸಂಪ್ರದಾಯ ಎಂದು ಟ್ರಸ್ಟ್ ಹೇಳಿದೆ.

ವೈಜಯಂತಿ ಮಾಲಾ, ಸಿಕ್ಕಿಲ್ ಗುರುಚರಣ್, ಪಂಡಿತ್ ಸಜ್ಜನ್ ಮಿಶ್ರಾ, ಜಸ್‌ಬೀರ್ ಜಸ್ಸಿ, ಅರುಣಾ ಶ್ರೀರಾಮ್, ಸ್ಮಪ್ನ ಸುಂದರಿ, ರಾಹುಲ್ ದೇಶಪಾಂಡೆ, ಸುರೇಶ್ ವಾಡ್ಕರ್, ದರ್ಶನಾ ಜವೇರಿ, ಉದಯ್ ಭವಾಲ್ಕರ್, ಜಯಂತ್ ಕುಮರೇಶ್, ಪೂರ್ಣ ದಾಸ್ ಬೌಲ್, ರಜನಿ, ಗಾಯತ್ರಿ ಮತ್ತು ದೇವಕಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT