ಅಹಮದಾಬಾದ್: ಕಾನೂನು ಪದವೀಧರರು ನ್ಯಾಯಾಲಯಗಳಲ್ಲಿ ಅಭ್ಯಾಸ ಮಾಡುವ ಬದಲು ಕಾರ್ಪೊರೇಟ್ ವಲಯದಲ್ಲಿ ಉದ್ಯೋಗವನ್ನು ಆರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಪರಿಸ್ಥಿತಿ ಚಿಂತಾಜನಕವಾಗಲಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಶನಿವಾರ ಹೇಳಿದರು.

ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದಲ್ಲಿ ಸೂರ್ಯಕಾಂತ್ ಮಾತನಾಡಿದರು. ‘ಪ್ರಾಯೋಗಿಕ ಅನುಭವದಲ್ಲಿ ಕಲಿಯಬಹುದಾದ ಪಾಠವನ್ನು ತರಗತಿಯಲ್ಲಿ ಕಲಿಸಲು ಸಾಧ್ಯವಿಲ್ಲ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

‘ಶೇ 93ರಷ್ಟು ಕಾನೂನು ಪದವೀಧರರನ್ನು ಕಾರ್ಪೊರೇಟ್ ಸಂಸ್ಥೆಗಳು ವಿಶ್ವವಿದ್ಯಾಲಯದ ಹೊರಗೆ ಉದ್ಯೋಗದ ಆಮಿಷವೊಡ್ಡಿ ಹೈಜಾಕ್ ಮಾಡುತ್ತಿವೆ. ಇದು ನನ್ನ ಚಿಂತೆ ಹೆಚ್ಚಿಸಿದೆ. ಏಕೆಂದರೆ ರಾಷ್ಟ್ರೀಯ ಕಾನೂನು ವಿದ್ಯಾಕೇಂದ್ರಗಳು, ಬಾರ್ ಮತ್ತು ಬೆಂಚ್ಗೆ ಅಗತ್ಯವಿರುವ ಸದಸ್ಯರನ್ನು ಅಣಿಗೊಳಿಸುತ್ತವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.