ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದಿ ಲೇಖಕಿ ಮಾಲತಿ ಜೋಶಿ ನಿಧನ

Published 16 ಮೇ 2024, 18:39 IST
Last Updated 16 ಮೇ 2024, 18:39 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಖ್ಯಾತ ಹಿಂದಿ ಲೇಖಕಿ ಮಾಲತಿ ಜೋಶಿ (90) ಬುಧವಾರ ನಿಧನರಾದರು.

ತಮ್ಮ ಪುತ್ರ ಹಾಗೂ ಇಂದಿರಾಗಾಂಧಿ ಇಂಟರ್‌ನಲ್ ಸೆಂಟರ್ ಫಾರ್ ದಿ ಆರ್ಟ್ಸ್‌ನ (ಐಜಿಎನ್‌ಸಿಎ) ಸದಸ್ಯ ಕಾರ್ಯದರ್ಶಿ ಸಚ್ಚಿದಾನಂದ ಜೋಶಿ ಅವರ ದೆಹಲಿಯ ನಿವಾಸದಲ್ಲಿ ಮಾಲತಿ ಅವರು ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಸ್ನೇಹಿತರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಮಾಲ್ವಾ ಕೀ ಮೀರಾ’ ಎಂದೇ ಜನಪ್ರಿಯರಾಗಿರುವ ಜೋಶಿ 2018ರಲ್ಲಿ ‘ಪದ್ಮಶ್ರೀ’ ಪುರಸ್ಕಾರಕ್ಕೆ ಭಾಜನರಾಗಿದ್ದರು.

‘ಮಧ್ಯಂತರ’, ‘ಪಟಾಕ್ಷೇಪ’, ‘ಪರಾಜಯ’, ‘ಏಕ್ ಘರ್ ಸಪ್ನೋ ಕಾ’, ‘ವೋ ತೇರಾ ಘರ್‌ ಯೇ ಮೇರಾ ಘರ್’ ಹಾಗೂ ಕಾದಂಬರಿ ‘ಔರತ್ ಏಕ್ ರಾತ್ ಹೈ’ ಇವರ ಜನಪ್ರಿಯ ಕೃತಿಗಳು. ಹಿಂದಿ, ಮರಾಠಿ ಭಾಷೆಯಲ್ಲಿ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಲೋಧಿ ರಸ್ತೆಯ ಸ್ಮಶಾನದಲ್ಲಿ ಗುರುವಾರ ಅಂತ್ಯಕ್ರಿಯೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT