ನವದೆಹಲಿ: ಟಿಬೆಟ್‌ನಿಂದ ತಪ್ಪಿಸಿಕೊಂಡು 1959ರಲ್ಲಿಭಾರತಕ್ಕೆ ಬಂದಿದ್ದ ದಲೈ ಲಾಮಾ ಅವರು ತಮ್ಮ ಗುರು ಖುನು ಲಾಮಾ ಅವರನ್ನು ಹುಡುಕಲು ಹಲವು ಪ್ರಯತ್ನಗಳನ್ನು ಮಾಡಿದ್ದರು. ಕೊನೆಗೆ ವಾರಾಣಸಿಯ ಶಿವಮಂದಿರವೊಂದರಲ್ಲಿ ವೇಷ ಮರೆಸಿಕೊಂಡಿದ್ದ ತಮ್ಮ ಗುರುವನ್ನು ಅವರು ಪತ್ತೆಹಚ್ಚಿದರು ಎಂಬ ಮಾಹಿತಿಯನ್ನು ಹೊಸ ಕೃತಿಯೊಂದು ಉಲ್ಲೇಖಿಸಿದೆ.

‘ಖುನು ಲಾಮಾ ಅವರು ಯಾರ ಗಮನಕ್ಕೂ ಬರದಂತೆ ಇರುತ್ತಿದ್ದ ಕಾರಣ ಅವರನ್ನು ಹುಡುಕಲು ದಲೈ ಲಾಮಾ ಅವರು ಕಷ್ಟಪಟ್ಟಿದ್ದರು. ತಮ್ಮ ಪ್ರತಿನಿಧಿಗಳನ್ನು ದೇಶದ ಬಹುತೇಕ ಎಲ್ಲ ಬೌದ್ಧ ಧಾರ್ಮಿಕ ಕೇಂದ್ರಗಳಿಗೆ ದಲೈ ಲಾಮಾ ಕಳುಹಿಸಿದ್ದರು, ಆದರೆ ಖುನು ಲಾಮಾ ಅವರು ಪತ್ತೆಯಾಗಿರಲಿಲ್ಲ ಎಂದು‘ದಿ ದಲೈ ಲಾಮಾ ಸೆಂಟರ್ ಫಾರ್ ಎಥಿಕ್ಸ್ ಆ್ಯಂಡ್ ಟ್ರಾನ್ಸ್‌ಫಾರ್ಮೇಟಿವ್ ವ್ಯಾಲ್ಯೂಸ್’ ಕೇಂದ್ರದ ಅಧ್ಯಕ್ಷ ಟೆನ್ಜಿನ್ ಪ್ರಿಯದರ್ಶಿ ಅವರು ಬರೆದಿರುವ‘ರನ್ನಿಂಗ್ ಟುವರ್ಡ್ಸ್ ಮಿಸ್ಟರಿ: ದಿ ಅಡ್ವೆನ್ಚರ್ ಆಫ್ ಅನ್‌ಕನ್ವೆನ್ಷನಲ್ ಲೈಫ್’ನಲ್ಲಿ ತಿಳಿಸಲಾಗಿದೆ.

‘ತಮ್ಮನ್ನು ಭೇಟಿಯಾಗಿ ಗೌರವ ಸಲ್ಲಿಸಲು ಯಾರಾದರೂ ಬಂದಾಗ, ಯಾರೂ ಅಡ್ಡಿಪಡಿಸಬಾರದು ಎನ್ನುವ ಕಾರಣಕ್ಕೆ ಸಹಾಯಕನೊಬ್ಬನನ್ನು ದ್ವಾರದ ಹೊರಗೆ ಕಳುಹಿಸಿ ಬೀಗ ಹಾಕಿಸುತ್ತಿದ್ದರು. ನಂತರದಲ್ಲಿ ದ್ವಾರದ ಕೆಳಗಿನಿಂದ ಕೀಲಿಕೈ ಪಡೆಯುತ್ತಿದ್ದರು. ಭೇಟಿಯ ನಂತರ ಕೀಲಿಕೈಯನ್ನು ಮತ್ತೆ ಸಹಾಯಕನಿಗೆ ನೀಡುತ್ತಿದ್ದರು.’

‘ಹೀಗೊಮ್ಮೆ ಅನಿರೀಕ್ಷಿತವಾಗಿ ವಾರಾಣಸಿಯ ಶಿವಮಂದಿರದಲ್ಲಿ ವೇಷಮರೆಸಿಕೊಂಡಿದ್ದ ಖುನು ಲಾಮಾ ಅವರನ್ನು ದಲೈ ಲಾಮಾ ಪತ್ತೆಹಚ್ಚಿದ್ದರು. ದಲೈ ಲಾಮಾ ಅವರನ್ನು ಭೇಟಿಯಾಗುತ್ತೀರಾ ಎಂದು ಅವರ ಪ್ರತಿನಿಧಿಯೊಬ್ಬರು ಕೇಳಿದ ಸಂದರ್ಭದಲ್ಲಿ ‘ತನಗೆ ಅನಾರೋಗ್ಯವಿದೆ. ಸಾಧ್ಯವಿಲ್ಲ’ ಎಂದು ಖುನು ಲಾಮಾ ಹೇಳಿದ್ದರು. ವಾಸ್ತವದಲ್ಲಿ ಅವರ ಬಳಿ ಅತಿಥಿಗಳಿಗೆ ಕುಳಿತುಕೊಳ್ಳಲು ಕುರ್ಚಿ ಇಲ್ಲದ ಕಾರಣ ಭೇಟಿ ನಿರಾಕಾರಿಸಿದ್ದರು. ಹೀಗಿದ್ದರೂ ದಲೈ ಲಾಮಾ ಒತ್ತಾಯದ ಮೇರೆಗೆ ಅವರು ಭೇಟಿ ಮಾಡಿದ್ದರು ಎಂದು ಕೃತಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.