ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಅಭಿವೃದ್ಧಿ: 129ನೇ ಸ್ಥಾನಕ್ಕೆ ಭಾರತ

Last Updated 9 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಕಾರ್ಯಕ್ರಮವು (ಯುಎನ್‌ಡಿಪಿ) 2019ರ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ ಭಾರತದ ಸ್ಥಾನವು 130ರಿಂದ 129ಕ್ಕೆ ಏರಿಕೆಯಾಗಿದೆ

4 ವರ್ಗಗಳು:

* ಅತಿ ಹೆಚ್ಚು ಅಭಿವೃದ್ಧಿ ವಿಭಾಗ (0.801ಕ್ಕಿಂತ ಹೆಚ್ಚು ಅಂಕ)

* ಹೆಚ್ಚು ಅಭಿವೃದ್ಧಿ ವಿಭಾಗ (0.700ಕ್ಕಿಂತ ಹೆಚ್ಚು ಅಂಕ)

* ಮಧ್ಯಮ ಅಭಿವೃದ್ಧಿ ವಿಭಾಗ (0.550ಕ್ಕಿಂತ ಹೆಚ್ಚು ಅಂಕ)

* ಕಡಿಮೆ ಅಭಿವೃದ್ಧಿ ವಿಭಾಗ (0.550ಕ್ಕಿಂತ ಕಡಿಮೆ ಅಂಕ)

50% ಏರಿಕೆ:ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕ ಮೌಲ್ಯವು ಶೇ 50ರಷ್ಟು ಏರಿಕೆ ಕಂಡಿದೆ

0.647: ಈಗಿನ ಮೌಲ್ಯ

0.431: ಹಿಂದಿನ ಮೌಲ್ಯ

0.634:ದಕ್ಷಿಣ ಏಷ್ಯಾ ದೇಶಗಳ ಸರಾಸರಿ ಮೌಲ್ಯ

ಮೊದಲ ಮೂರು ಸ್ಥಾನ

-ನಾರ್ವೆ

-ಸ್ವಿಟ್ಜರ್‌ಲೆಂಡ್

‌-ಐರ್ಲೆಂಡ್‌

ಭಾರತದ ಸ್ಥಿತಿ

ಸರಾಸರಿ ಆಯುಷ್ಯ;ಶಾಲಾ ಕಲಿಕೆಯ ಅವಧಿ;ಶಾಲಾ ಕಲಿಕೆಯ ಸರಾಸರಿ ಅವಧಿ; 69.4;12.3;6.5

27.1 ಕೋಟಿ: 2005–06ರಿಈಂದ 2015–16ರ ಅವಧಿಯಲ್ಲಿ ಬಡತನದಿಂದ ಹೊರಗೆ ಬಂದವರ ಸಂಖ್ಯೆ

189: ಸಮೀಕ್ಷೆಗೊಳಗಾದ ಒಟ್ಟು ದೇಶಗಳು

1990ರಿಂದ 2018ರ ನಡುವೆ

* ಸರಾಸರಿ ಜೀವಿತಾವಧಿಯಲ್ಲಿ 11.6 ವರ್ಷಗಳಷ್ಟು ಏರಿಕೆ

* ಶಾಲಾ ಕಲಿಕೆಯ ನಿರೀಕ್ಷಿತ ಅವಧಿಯಲ್ಲಿ 4.7 ವರ್ಷಗಳಷ್ಟು ಏರಿಕೆ

* ಶಾಲಾ ಕಲಿಕೆಯ ಸರಾಸರಿ ಅವಧಿಯಲ್ಲಿ 3.5 ವರ್ಷಗಳಷ್ಟು ಏರಿಕೆ

* ತಲಾ ಆದಾಯದಲ್ಲಿ ಶೇ 250ರಷ್ಟು ಏರಿಕೆ

ಲಿಂಗ ಅಸಮಾನತೆ: ಈ ವಿಚಾರದಲ್ಲಿ 162 ದೇಶಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಸ್ಥಾನ 122. ಭಾರತದ ಪುರುಷರು ಮತ್ತು ಮಹಿಳೆಯರು ಲಿಂಗ ಸಮಾನತೆಯ ವಿಚಾರದಲ್ಲಿ ಪೂರ್ವಗ್ರಹಗಳನ್ನು ಹೊಂದಿದ್ದಾರೆ. ಇದು ಮಹಿಳೆಯರ ಸಶಕ್ತೀಕರಣಕ್ಕೆ ತೊಡಕಾಗಿದೆ ಎಂದು ವರದಿ ಹೇಳಿದೆ.

ಆಧಾರ: ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT