ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಲ್‌ಚೇರ್‌ ಮೇಲೆ ಕುಳಿತು ಗರ್ಬಾ ನೃತ್ಯ ಮಾಡಿದ 700ಕ್ಕೂ ಹೆಚ್ಚು ವಿಶೇಷಚೇತನರು

Published 22 ಅಕ್ಟೋಬರ್ 2023, 9:29 IST
Last Updated 22 ಅಕ್ಟೋಬರ್ 2023, 9:29 IST
ಅಕ್ಷರ ಗಾತ್ರ

ಅಹಮದಾಬಾದ್‌: ಆದಿಶಕ್ತಿಯ ಹಬ್ಬವಾದ ನವರಾತ್ರಿಯನ್ನು ದೇಶದಾದ್ಯಂತ ಭಕ್ತಿ ಭಾವದಿಂದ ಆಚರಿಸಲಾಗುತ್ತಿದೆ. ಈ ನಡುವೆ ಅಹಮದಾಬಾದ್‌ನಲ್ಲಿ ದಿವ್ಯಾಂಗ್‌ ನವರಾತ್ರಿ ಮಹೋತ್ಸವದಲ್ಲಿ ವಿಶೇಷಚೇತನರನ್ನು ಪ್ರೋತ್ಸಾಹಿಸಲು ಗರ್ಬಾ ಫೆಸ್ಟ್ ಅನ್ನು ಆಯೋಜಿಸಲಾಗಿದೆ. 

ಈ ಕಾರ್ಯಕ್ರಮದಲ್ಲಿ 700ಕ್ಕೂ ಹೆಚ್ಚು ವಿಶೇಷ ಚೇತನರು ಗಾಲಿಕುರ್ಚಿಗಳ(ವೀಲ್‌ಚೇರ್‌)ಮೇಲೆ ಕುಳಿತು ನೃತ್ಯ ಗರ್ಬಾ ಮಾಡಿದ್ದಾರೆ. ಇವರೊಂದಿಗೆ ಹಿರಿಯರು, ಯುವಕರು ಕೂಡ ಸೇರಿಕೊಂಡಿದ್ದಾರೆ. ಇದರ ವಿಡಿಯೊವನ್ನು ಎಎನ್‌ಐ ಸಂಸ್ಥೆ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

ವಿಪುಲ್ಬಾಯ್‌ ಎನ್ನುವವರು ಈ ಕಾರ್ಯಕ್ರಮವನ್ನು ಕಳೆದ ಆರು ವರ್ಷಗಳಿಂದ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ‘ನಾನು ಸುಮಾರು ಒಂದು ದಶಕದ ಹಿಂದೆ ಮೈದಾನದಲ್ಲಿ ನನ್ನ ಸ್ನೇಹಿತರೊಂದಿಗೆ ಗರ್ಬಾ ಆಡುತ್ತಿದ್ದಾಗ ಸ್ಥಳದಲ್ಲಿ ವಿಶೇಷಚೇತನ ವ್ಯಕ್ತಿಯನ್ನು ಕಂಡೆ. ಅವರನ್ನು ನೋಡಿ ಭಾವುಕನಾದೆ. ಅವರಿಗಾಗಿ ಗರ್ಬಾವನ್ನು ಆಯೋಜಿಸಲು ಆ ದಿನವೇ ನಿರ್ಧರಿಸಿದೆ. ಆರು ವರ್ಷಗಳಿಂದ ಅದು ನಡೆದುಕೊಂಡು ಬರುತ್ತಿದೆ. ಇಂದು ಗರ್ಬಾ ಆಡಲು ಗುಜರಾತ್ ಮತ್ತು ಸುತ್ತಮುತ್ತಲಿನ ಸುಮಾರು 700 ವಿಶೇಷಚೇತನರು ಇಲ್ಲಿ ಸೇರಿದ್ದರು’ ಎಂದು ಖುಷಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT