ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಂಗೆ ಮದ್ವೆಯಾಗಿ 45 ವರ್ಷವಾಯ್ತು, ಸಿಟ್ಟು ಬರಲ್ಲ: ಧನಕರ್

Published 3 ಆಗಸ್ಟ್ 2023, 16:02 IST
Last Updated 3 ಆಗಸ್ಟ್ 2023, 16:02 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಮಣಿಪುರ ಸಂಘರ್ಷಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಬಿಸಿ ಚರ್ಚೆಗೆ ಸಾಕ್ಷಿಯಾದ ರಾಜ್ಯಸಭೆಯ ಕಲಾಪದಲ್ಲಿ ಗುರುವಾರ ಹಾಸ್ಯದ ಬುಗ್ಗೆ ಉಕ್ಕಿತು.

ಸಭಾಪತಿ ಜಗದೀಪ್‌ ಧನಕರ್‌ ಅವರು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಭಾಪತಿ ಮಾತನಾಡಲು ಅವಕಾಶ ನೀಡಿದರು. ಆಗ ಖರ್ಗೆ ಅವರು, ‘ಸಭಾಪತಿ ಅವರಿಗೆ ಮದುವೆಯಾಗಿ 45 ವರ್ಷಗಳಾಗಿವೆ. ಆದರೂ, ಪ್ರತಿ‍ಪಕ್ಷಗಳ ಸದಸ್ಯರ ಪ್ರಶ್ನೆಗೆ ಉತ್ತರಿಸುವಾಗ ಏಕೆ ಸಿಡಿಮಿಡಿಗೊಳ್ಳುತ್ತಾರೆ ಎಂಬುದೇ ಅರ್ಥವಾಗುತ್ತಿಲ್ಲ’ ಎಂದು ಹೇಳಿ ಕುಳಿತುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಧನಕರ್‌, ‘ನಾನು ಮದುವೆಯಾಗಿ 45 ವರ್ಷಗಳಾಗಿವೆ. ಹಾಗಾಗಿ, ನನಗೆ ಕೋಪವೇ ಬರುವುದಿಲ್ಲ’ ಎಂದರು. ಆಗ ಸದನವು ನಗೆಗಡಲಲ್ಲಿ ತೇಲಿತು. 

‘ಪಿ. ಚಿದಂಬರಂ ಅವರು ಹಿರಿಯ ವಕೀಲರಾಗಿದ್ದಾರೆ. ಅವರಿಗೆ ಎಲ್ಲವೂ ತಿಳಿದಿದೆ. ಪತ್ನಿಯರ ಮೇಲೆ ಕೋಪಗೊಳ್ಳುವ ಹಕ್ಕು ನಮಗಿಲ್ಲ ಎಂದ ಧನಕರ್‌, ‘ನನ್ನ ಪತ್ನಿ ಸದನದ ಸದಸ್ಯರಾಗಿಲ್ಲ. ಹಾಗಾಗಿ, ಅವರ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ‌‌ಖರ್ಗೆ ಅವರೇ ನಿಮ್ಮ ಹೇಳಿಕೆಯನ್ನು ಬದಲಾಯಿಸಿಕೊಳ್ಳಿ’ ಎಂದರು.

ಆಗ ಖರ್ಗೆ ಅವರು, ‘ನೀವು ಕೋಪವನ್ನು ತೋರಿಸುವುದಿಲ್ಲ. ಆದರೆ, ನಿಮ್ಮೊಳಗಿನಿಂದಲೇ ಸಿಟ್ಟಾಗುತ್ತೀರಿ’ ಎಂದಾಗ ಪಕ್ಷಭೇದ ಮರೆತು ಎಲ್ಲಾ ಸದಸ್ಯರು ನಗೆಗಡಲಲ್ಲಿ ಮುಳುಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT