ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಸೇರಿ ವಿವಿಧೆಡೆ ಐಟಿ ಶೋಧ: ₹1,300 ಕೋಟಿ ಬೇನಾಮಿ ಆದಾಯ ಪತ್ತೆ

Last Updated 18 ನವೆಂಬರ್ 2022, 8:32 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಸೇರಿದಂತೆ ವಿವಿಧೆಡೆ ಶೋಧ ಕಾರ್ಯ ನಡೆಸಿರುವ ಆದಾಯ ತೆರಿಗೆ ಇಲಾಖೆಯು ₹1,300 ಕೋಟಿಗೂ ಅಧಿಕ ಬೇನಾಮಿ ಆದಾಯ ಪತ್ತೆ ಹಚ್ಚಿದೆ.

ಕರ್ನಾಟಕ ಮೂಲದ ಕೆಲ ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳಿಗೆ ಸೇರಿದ ಬೆಂಗಳೂರು, ಮುಂಬೈ ಮತ್ತು ಗೋವಾದಲ್ಲಿನ ಸುಮಾರು 50 ಸ್ಥಳಗಳಲ್ಲಿ ಅಕ್ಟೋಬರ್‌ 20 ಮತ್ತು ನವೆಂಬರ್‌ 2ರಂದು ಶೋಧ ಕಾರ್ಯ ನಡೆಸಲಾಗಿತ್ತು. ಈ ವೇಳೆ ₹1,300 ಕೋಟಿಗೂ ಅಧಿಕ ಬೇನಾಮಿ ಆದಾಯ ಪತ್ತೆಯಾಗಿದೆ’ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಗುರುವಾರ ತಿಳಿಸಿದೆ.

‘ದಾಳಿ ವೇಳೆ ₹24 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕ್ರಯ ಒಪ್ಪಂದ, ಭೂ ಪರಿವರ್ತನೆ, ಭೂ ಸ್ವಾಧೀನ ಪ್ರಮಾಣ ಪತ್ರಗಳನ್ನು ಜಪ್ತಿ ಮಾಡಲಾಗಿದೆ’ ಎಂದೂಸಿಬಿಡಿಟಿ ಹೇಳಿದೆ.

‘ಭೂ ಪರಿವರ್ತನೆಗಾಗಿ ಜಂಟಿ ಒಪ್ಪಂದಗಳನ್ನು ಮಾಡಿಕೊಂಡಿದ್ದ ಭೂ ಮಾಲೀಕರು ತಮಗೆ ಸಂದಾಯವಾಗಿರುವ ಹಣದ ಕುರಿತು ಮಾಹಿತಿ ಒದಗಿಸಿರಲಿಲ್ಲ. ಹಲವು ವರ್ಷಗಳಿಂದ ಆದಾಯ ತೆರಿಗೆಯನ್ನೂ ಪಾವತಿಸಿರಲಿಲ್ಲ. ದಾಳಿ ವೇಳೆ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಆದಾಯದ ಮಾಹಿತಿ ಬಹಿರಂಗಪಡಿಸಿದ್ದಾರೆ’ ಎಂದೂ ಮಾಹಿತಿ ನೀಡಿದೆ.

ಅರೆಕಾಲಿಕ ಉದ್ಯೋಗ ಹಗರಣ: 80 ಬ್ಯಾಂಕ್‌ ಖಾತೆ ಜಪ್ತಿ ಮಾಡಿದ ಇ.ಡಿ
ಬೆಂಗಳೂರು:
‘ಸೂಪರ್‌ ಲೈಕ್‌ ಅರ್ನಿಂಗ್ ಅಪ್ಲಿಕೇಷನ್‌ (ಆನ್‌ಲೈನ್‌ ಮೂಲಕ ಅರೆಕಾಲಿಕ ಉದ್ಯೋಗ ನೀಡುವುದಾಗಿ ನಂಬಿಸಿ ವಂಚನೆ) ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇ.ಡಿ) ಕರ್ನಾಟಕದಲ್ಲಿ ಒಟ್ಟು 80 ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಿದೆ. ಈ ಖಾತೆಗಳಲ್ಲಿ ₹1 ಕೋಟಿ ಮೊತ್ತ ಇತ್ತು’ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT