ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಮ್ಮ ಮುಂದೆ ತಲೆ ತಗ್ಗಿಸಲಾರೆ: ಕೇಂದ್ರ ಸರ್ಕಾರದ ವಿರುದ್ಧ ಲಾಲು ಆಕ್ರೋಶ

ನಮ್ಮೊಂದಿಗೆ ರಾಜಕೀಯ ಹೋರಾಟ ನಡೆಸಲು ಬಿಜೆಪಿ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯುತ್ತದೆಯೇ?: ಲಾಲು ಪ್ರಶ್ನೆ
Published : 11 ಮಾರ್ಚ್ 2023, 7:25 IST
ಫಾಲೋ ಮಾಡಿ
Comments

ಪಟನಾ: ಉದ್ಯೋಗಕ್ಕಾಗಿ ಭೂಮಿ ಪಡೆದಿರುವ ಆರೋಪದಲ್ಲಿ ಜಾರಿ ನಿರ್ದೇಶನಾಲಯವು, ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದೆ ಎಂದು ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಆರೋಪಿಸಿದ್ದಾರೆ. ಅಲ್ಲದೇ ಏನೇ ಕಿರುಕುಳ ನೀಡಿದರೂ ನಿಮ್ಮ ಮುಂದೆ ತಲೆ ಬಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ನಾನು ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೋಡಿದ್ದೇವೆ. ನಾವು ಅದರ ವಿರುದ್ಧ ಹೋರಾಟ ಮಾಡಿದ್ದೆವು ಕೂಡ. ಆಧಾರರಹಿತ ಸೇಡಿನ ಪ್ರಕರಣದಲ್ಲಿ ನನ್ನ ಪುತ್ರಿಯರು, ಸಣ್ಣ ಮೊಮ್ಮಕ್ಕಳು ಹಾಗೂ, ಗರ್ಭಿಣಿ ಸೊಸೆಯನ್ನು ವಿಚಾರಣೆ ನೆಪದಲ್ಲಿ ಬಿಜೆಪಿಯ ಇ.ಡಿ 15 ಗಂಟೆಗಳ ಕಾಲ ಕೂರಿಸಿದೆ. ನಮ್ಮೊಂದಿಗೆ ರಾಜಕೀಯ ಹೋರಾಟ ನಡೆಸಲು ಬಿಜೆಪಿ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯುತ್ತದೆಯೇ?‘ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ನಾನು ಅವರ ಎದುರು ಯಾವತ್ತೂ ತಲೆ ತಗ್ಗಿಸಿಲ್ಲ. ನನ್ನ ಕುಟುಂಬದ ಅಥವಾ ನನ್ನ ಪಕ್ಷದ ಯಾರೊಬ್ಬರು ಕೂಡ ನಿಮ್ಮ ಮುಂದೆ ತಲೆ ಬಾಗಲ್ಲ‘ ಎಂದು ಅವರು ಇನ್ನೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಉದ್ಯೋಗಕ್ಕಾಗಿ ಭೂಮಿ ಹಗರಣ ಸಂಬಂಧ ತಮ್ಮ ಪುತ್ರ ತೇಜಸ್ವಿ ಯಾದವ್ ಅವರ ದೆಹಲಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯವು ಶುಕ್ರವಾರ ದಾಳಿ ನಡೆಸಿತ್ತು. ಅದಕ್ಕೂ ಮುನ್ನ ಪತ್ನಿ ರಾಬ್ರಿ ದೇವಿ ಹಾಗೂ ಇತರೆ ಕುಟುಂಬ ಸದಸ್ಯರ ವಿರುದ್ಧ ಸಿಬಿಐ ದಾಳಿ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT