ನವದೆಹಲಿ: ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣ ಸಂಬಂಧ ಬೆಂಗಳೂರು ಸೇರಿದಂತೆ ಎಂಟು ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಸೋಮವಾರ ಶೋಧ ಕಾರ್ಯ ನಡೆಸಿದ್ದಾರೆ.

‘ಆಗಿನ ಆದಾಯ ತೆರಿಗೆ ಉಪ ಆಯುಕ್ತ ಸೌರಭ್ ನಾಯಕ್ (ತನಿಖೆ) ಹಾಗೂ ಸಹಾಯಕ ಆಯುಕ್ತ ಡಿ.ಕುಮಾರ್ ಅವರಿಗೆ ಸೇರಿದ ಎರಡು ಸ್ಥಳಗಳು ಸೇರಿದಂತೆ ಬೆಂಗಳೂರಿನಲ್ಲಿ ಐದು ಕಡೆಗಳಲ್ಲಿ ಶೋಧ ನಡೆಸಲಾಯಿತು’ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

‘ನಾಯಕ್ ಹಾಗೂ ಕುಮಾರ್ ಇಬ್ಬರೂ ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್‌ಗೆ ನೆರವು ನೀಡಿರುವ ಶಂಕೆ ಇದೆ. 2017ರಲ್ಲಿಯೇ ಇವರು ಐಎಂಎ ಕಚೇರಿಗಳಲ್ಲಿ ಶೋಧ ನಡೆಸಿ, ಲೆಕ್ಕಪತ್ರ ಪರಿಶೀಲಿಸಿದ್ದಾರೆ.

ದೊಡ್ಡ ಮೊತ್ತದ ನಗದು ಸ್ವೀಕರಿಸಿರುವುದು ಲೆಕ್ಕಪತ್ರ ದಾಖಲೆಗಳಲ್ಲಿ ಉಲ್ಲೇಖವಾಗಿದ್ದರೂ ಈ ಕುರಿತು ನಿರ್ಲಕ್ಷ ತೋರಿದ್ದಾರೆ. ಅಕ್ರಮ ಕುರಿತು ಕ್ರಮ ಕೈಗೊಂಡಿಲ್ಲ. ಇದಕ್ಕಾಗಿ ಅಧಿಕಾರಿಗಳಿಗೆ ಖಾನ್ ದೊಡ್ಡ ಮೊತ್ತದ ಲಂಚ ನೀಡಿರುವ ಸಂಶಯ ಇದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.