‘ವೈದ್ಯ ವೃತ್ತಿಗೆ ನಿಮ್ಮಿಂದ ಬಂದಿರುವ ಅಪಖ್ಯಾತಿ ಹಿನ್ನೆಲೆಯಲ್ಲಿ ಕ್ರಮಕ್ಕೆ ಪಶ್ಚಿಮ ಬಂಗಾಳದ ಐಎಂಎ ರಾಜ್ಯ ಘಟಕ, ಇತರೆ ವೈದ್ಯಕೀಯ ಸಂಘಗಳೂ ಒತ್ತಾಯಿಸಿವೆ. ಹೀಗಾಗಿ, ಐಎಂಎಯ ಶಿಸ್ತು ಸಮಿತಿ ನಿಮ್ಮ ಸದಸ್ಯತ್ವ ಅಮಾನತಿಗೆ ಸರ್ವಾನುಮತದ ನಿರ್ಣಯ ಕೈಗೊಂಡಿದೆ ಎಂದೂ ಅದು ತಿಳಿಸಿದೆ.
ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯ ಭಾಗವಾಗಿ ಕೇಂದ್ರೀಯ ರನಿಖಾ ದಳವು(ಸಿಬಿಐ) ಆರ್.ಜಿ. ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನು ಬುಧವಾರ(ಆಗಸ್ಟ್ 26) ಎರಡನೇ ಸುತ್ತಿನ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಿತ್ತು.
ಮೆಡಿಕಲ್ ಕಾಲೇಜಿನ ಹಣಕಾಸು ವ್ಯವಹಾರದಲ್ಲಿ ಭ್ರಷ್ಟಾಚಾರ ಕುರಿತಂತೆ ತನಿಖೆಗೂ ಕಲ್ಕತ್ತ ಹೈಕೋರ್ಟ್‌ನ ಏಕಸದಸ್ಯ ಪೀಠ ಆದೇಶಿಸಿತ್ತು.