ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್‌ನಿಂದ ವರ್ಧಿತ ರೋಗ ನಿರೋಧಕ ಶಕ್ತಿಯಿಂದ ಡೆಲ್ಟಾ ತಟಸ್ಥ: ಅಧ್ಯಯನ ವರದಿ

ಐಸಿಎಂಆರ್‌ ವಿಜ್ಞಾನಿಗಳಿಂದ ಅಧ್ಯಯನ
Last Updated 26 ಜನವರಿ 2022, 13:47 IST
ಅಕ್ಷರ ಗಾತ್ರ

ನವದೆಹಲಿ: ಓಮೈಕ್ರಾನ್‌ ತಳಿಯ ಸೋಂಕು ತಗುಲಿದವರ ದೇಹದಲ್ಲಿ ವೃದ್ಧಿಯಾಗುವ ರೋಗ ನಿರೋಧಕ ಶಕ್ತಿಯು, ಡೆಲ್ಟಾ ಸೇರಿದಂತೆ ಕೊರೊನಾ ವೈರಸ್‌ನ ಇತರ ಎಲ್ಲ ‘ಕಳವಳಕಾರಿ ತಳಿ’ಗಳನ್ನು ತಟಸ್ಥಗೊಳಿಸುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್‌) ಕೈಗೊಂಡಿರುವ ಅಧ್ಯಯನವೊಂದು ಹೇಳಿದೆ.

ಓಮೈಕ್ರಾನ್‌ನಿಂದಾಗಿ ವೃದ್ಧಿಯಾಗುವ ರೋಗ ನಿರೋಧಕ ಶಕ್ತಿಯು ಈ ತಳಿಯನ್ನೂ ತಟಸ್ಥಗೊಳಿಸುತ್ತದೆ. ಜೊತೆಗೆ, ಡೆಲ್ಟಾ ತಳಿ ಸೋಂಕು ಮತ್ತೊಮ್ಮೆ ಬಾಧಿಸುವ ಸಾಧ್ಯತೆಯೂ ಕಡಿಮೆಯಾಗುತ್ತದೆ ಎಂದು ಅಧ್ಯಯನವು ತಿಳಿಸಿದೆ.

ಹೀಗಾಗಿ, ಓಮೈಕ್ರಾನ್‌ ತಳಿಗೆ ತಕ್ಕುದಾದ ಲಸಿಕೆ ಕಾರ್ಯತಂತ್ರದ ಅಗತ್ಯವಿದೆ ಎಂದು ಐಸಿಎಂಆರ್‌ನ ಅಧ್ಯಯನ ಪ್ರತಿಪಾದಿಸಿದೆ. ವಿಜ್ಞಾನಿಗಳಾದ ಪ್ರಜ್ಞಾ ಡಿ.ಯಾದವ್, ಗಜಾನನ ಎನ್.ಸಪ್ಕಾಲ್, ರಿಮಾ ಡಿ.ಸಹಾಯ್, ಪ್ರಿಯಾ ಅಬ್ರಹಾಂ ಅವರಿದ್ದ ತಂಡ ಈ ಅಧ್ಯಯನ ನಡೆಸಿದೆ.

39 ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇವರ ಪೈಕಿ 25 ಜನರು ಅಸ್ಟ್ರಾ–ಜೆನೆಕಾದ ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದರೆ, 8 ಜನರು ಫೈಝರ್‌ನ ಲಸಿಕೆಯ ಎರಡು ಡೋಸ್‌ಗಳನ್ನು ಹಾಗೂ 6 ಮಂದಿ ಯಾವುದೇ ಲಸಿಕೆಯನ್ನು ತೆಗೆದುಕೊಂಡಿರಲಿಲ್ಲ.

ಇವರ ಪೈಕಿ 28 ಜನರು ಯುಎಇ, ಬ್ರಿಟನ್, ಅಮೆರಿಕ ಹಾಗೂ ಆಫ್ರಿಕಾದ ವಿವಿಧ ರಾಷ್ಟ್ರಗಳಿಂದ ಮರಳಿದವರಾಗಿದ್ದರೆ, 11 ಜನರು ‘ಹೆಚ್ಚು ಅಪಾಯ’ದ ಸಂಪರ್ಕವನ್ನು ಹೊಂದಿದ್ದರು. ಎಲ್ಲರಿಗೂ ಓಮೈಕ್ರಾನ್‌ ತಳಿ ಸೋಂಕು ತಗುಲಿತ್ತು ಎಂದು ಐಸಿಎಂಆರ್‌ ಮೂಲಗಳು ಹೇಳಿವೆ.

‘ಓಮೈಕ್ರಾನ್‌ ತಳಿ ಸೋಂಕಿಗೆ ಒಳಗಾದವರಲ್ಲಿ ಸೃಷ್ಟಿಯಾಗುವ ಪ್ರತಿಕಾಯಗಳು ಡೆಲ್ಟಾ ಸೇರಿದಂತೆ ಎಲ್ಲ ಬಗೆಯ ಕಳವಳಕಾರಿ ತಳಿಗಳನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸುವ ಸಾಮರ್ಥ್ಯ ಹೊಂದಿವೆ ಎಂಬ ಗಮನಾರ್ಹ ಅಂಶವನ್ನು ನಮ್ಮ ಅಧ್ಯಯನ ತೋರಿಸಿಕೊಟ್ಟಿದೆ’ ಎಂದು ಮೂಲಗಳು ಹೇಳಿವೆ.

‘ಆದರೆ, ಅಧ್ಯಯನದ ಭಾಗವಾಗಿದ್ದವರ ಪೈಕಿ, ಲಸಿಕೆ ಪಡೆಯದವರ ಸಂಖ್ಯೆ ಕಡಿಮೆ ಇತ್ತು. ಇದು ನಮ್ಮ ಅಧ್ಯಯನದ ಪ್ರಮುಖ ಮಿತಿಯಾಗಿತ್ತು. ಲಸಿಕೆ ಪಡೆಯದಿರುವುದೇ ಇವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಪ್ರಮಾಣದಲ್ಲಿ ವೃದ್ಧಿಯಾಗಲು ಕಾರಣ ಇರಬಹುದು’ ಎಂದು ಅಧ್ಯಯನ ಕೈಗೊಂಡಿದ್ದ ವಿಜ್ಞಾನಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT