ನವದೆಹಲಿ: ದೇಶದಾದ್ಯಂತ ಶುಕ್ರವಾರ ಒಂದೇ ದಿನ 93 ಲಕ್ಷಕ್ಕೂ ಹೆಚ್ಚು ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಇದು ಈವರೆಗೆ ದಿನವೊಂದರಲ್ಲಿ ನೀಡಿದ ಗರಿಷ್ಠ ಡೋಸ್ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಶುಕ್ರವಾರ ಸಂಜೆ 7 ಗಂಟೆವರೆಗಿನ ಅಂಕಿಅಂಶ ಪ್ರಕಾರ, ಈವರೆಗೆ ಒಟ್ಟು 62 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ದಿನದ ಅಂತಿಮ ಲೆಕ್ಕಾಚಾರ ತಡರಾತ್ರಿ ವೇಳೆಗೆ ದೊರೆಯಲಿದೆ ಎಂದೂ ಸಚಿವಾಲಯ ಹೇಳಿದೆ.

ಓದಿ:ಲಸಿಕೆ ಪಡೆಯುವವರಿಗೆ ಬಲವಂತದಿಂದ ಕೋವಿಡ್ ಪರೀಕ್ಷೆ

‘ಶುಕ್ರವಾರ ಇಲ್ಲಿವರೆಗೆ 90 ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ. ದೇಶದ ನಾಗರಿಕರಿಗೆ ಅಭಿನಂದನೆಗಳು. ಲಸಿಕೆ ನೀಡಿಕೆಯ ಇಂದಿನ ಲೆಕ್ಕಾಚಾರ ಇನ್ನೂ ನಡೆಯುತ್ತಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ರಾತ್ರಿ 7.23ಕ್ಕೆ ಟ್ವೀಟ್ ಮಾಡಿದ್ದಾರೆ.

ಆಗಸ್ಟ್ 17ರಂದು 88 ಲಕ್ಷ ಡೋಸ್ ಕೋವಿಡ್ ಲಸಿಕೆ ನೀಡಲಾಗಿತ್ತು. ಇದು ಈವರೆಗಿನ ದಿನವೊಂದರ ಗರಿಷ್ಠ ಸಂಖ್ಯೆಯಾಗಿತ್ತು.

ಓದಿ:ಬೆಂಗಳೂರು ನಗರ ಜಿಲ್ಲೆ: 1 ಕೋಟಿ ಮಂದಿಗೆ ಕೋವಿಡ್ ಲಸಿಕೆ ವಿತರಣೆ

ಮೂರನೇ ಹಂತದ ಲಸಿಕೆ ನೀಡಿಕೆ ಅಭಿಯಾನ ಆರಂಭಗೊಂಡ ಬಳಿಕ ಈವರೆಗೆ 18–44 ವರ್ಷ ವಯಸ್ಸಿನ 23,72,15,353 ಜನರು ಲಸಿಕೆಯ ಮೊದಲ ಡೋಸ್ ಪಡೆದದ್ದು, 2,45,60,807 ಮಂದಿ ಎರಡನೇ ಡೋಸ್ ಅನ್ನೂ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.