ನವದೆಹಲಿ: ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಲಿರುವ 183 ಭಾರತೀಯ ಮೀನುಗಾರರು ಮತ್ತು ನಾಗರಿಕರ ಬಿಡುಗಡೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಪಾಕಿಸ್ತಾನವನ್ನು ಭಾರತ ಬುಧವಾರ ಒತ್ತಾಯಿಸಿದೆ.

ಪಾಕಿಸ್ತಾನದ ಕಸ್ಟಡಿಯಲ್ಲಿರುವ ಭಾರತೀಯರು ಎಂದು ನಂಬಲಾಗಿರುವ 18 ನಾಗರಿಕರು ಮತ್ತು ಮೀನುಗಾರರರು ಭಾರತದ ರಾಯಭಾರಿಗಳನ್ನು ಸಂಪರ್ಕಿಸಲು ತಕ್ಷಣ ಅವಕಾಶ ನೀಡುವಂತೆ ಕೋರಲಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

2008ರ ಒಪ್ಪಂದದಂತೆ ಪ್ರತಿವರ್ಷ ಜನವರಿ 1 ಮತ್ತು ಜುಲೈ 1ರಂದು ಎರಡೂ ದೇಶಗಳಲ್ಲಿರುವ ನಾಗರಿಕ ಕೈದಿಗಳು ಮತ್ತು ಮೀನುಗಾರರ ಪಟ್ಟಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಾಗುತ್ತದೆ.

ಪಾಕಿಸ್ತಾನದ ಪ್ರಜೆಗಳು ಅಥವಾ ಪಾಕಿಸ್ತಾನಿಗಳು ಎಂದು ನಂಬಲಾಗಿರುವ 381 ನಾಗರಿಕ ಕೈದಿಗಳು ಮತ್ತು 81 ಮೀನುಗಾರರ ಪಟ್ಟಿಯನ್ನು ಭಾರತ ಪಾಕಿಸ್ತಾನಕ್ಕೆ ನೀಡಿದೆ. ಪಾಕಿಸ್ತಾನವು 49 ನಾಗರಿಕರು ಮತ್ತು 217 ಮೀನುಗಾರರ ಪಟ್ಟಿಯನ್ನು ಭಾರತಕ್ಕೆ ನೀಡಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಪಾಕಿಸ್ತಾನ ತನ್ನ ಪ್ರಜೆಗಳೆಂದು ದೃಢೀಕರಿಸದ ಕಾರಣ ಭಾರತದಲ್ಲೇ ಉಳಿದಿರುವ 76 ಜನರ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಪಾಕಿಸ್ತಾನವನ್ನು ಒತ್ತಾಯಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.