ನವದೆಹಲಿ: ಭಾರತದ ಇಂಧನ ವಲಯವು 500 ಶತಕೋಟಿ ಡಾಲರ್ ಹೂಡಿಕೆ ಅವಕಾಶಗಳನ್ನು ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಜಾಗತಿಕ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.

‘ಇಂಡಿಯಾ ಎನರ್ಜಿ ವೀಕ್ 2026’ ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಬೇಡಿಕೆ ನಿರಂತರವಾಗಿ ಹೆಚ್ಚುತ್ತಿರುವ ಕಾರಣ ಭಾರತ ಇಂಧನ ವಲಯಕ್ಕೆ ಅವಕಾಶಗಳ ಭೂಮಿಯಾಗಿದೆ ಭಾರತ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾ ಕೇಂದ್ರವಾಗಲಿದೆ ಎಂದು ಹೇಳಿದರು.

2030ರ ವೇಳೆಗೆ ತೈಲ ಮತ್ತು ಅನಿಲ ವಲಯದಲ್ಲಿ ರಾಷ್ಟ್ರವು 100 ಶತಕೋಟಿ ಡಾಲರ್ ಹೂಡಿಕೆಗಳನ್ನು ಗುರಿಯಾಗಿಸಿಕೊಂಡಿದೆ. ತೈಲ ಸಂಸ್ಕರಣಾ ಸಾಮರ್ಥ್ಯವನ್ನು ವಾರ್ಷಿಕ 260 ಮಿಲಿಯನ್ ಟನ್ಗಳಿಂದ 300 ಟನ್ಗೆ ವಿಸ್ತರಿಸಲಾಗುವುದು ಎಂದು ಪ್ರಧಾನಿ ಹೇಳಿದರು.

ಭಾರತವು ಸುಧಾರಣೆಗಳನ್ನು ಸ್ಪಷ್ಟವಾಗಿ ಅನುಸರಿಸುತ್ತಿದೆ. ಎಲ್ಲ ವಲಯಗಳಲ್ಲಿ ಸುಧಾರಣೆಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದರು.

ಎಲ್ಲ ಒಪ್ಪಂದಗಳ ತಾಯಿ ಎಂದು ಕರೆಯಲಾಗುತ್ತಿರುವ ಭಾರತ ಮತ್ತು ಯುರೋಪಿಯನ್ ಯೂನಿಯನ್ನ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ವಿವರಿಸಿದ ಅವರು, ಈ ಒಪ್ಪಂದವು 140 ಕೋಟಿ ಭಾರತೀಯರು ಮತ್ತು ಯುರೋಪಿಯನ್ನರಿಗೂ ಹೊಸ ಅವಕಾಶಗಳನ್ನ ತೆರೆದಿದೆ ಎಂದಿದ್ದಾರೆ.

ಎರಡು ಆರ್ಥಿಕತೆಗಳ ನಡುವಿನ ಸಹಕಾರಕ್ಕೆ ಇದೊಂದು ಅತ್ಯತ್ತಮ ಉದಾಹರಣೆಯಾಗಿದೆ ಎಂದಿದ್ದಾರೆ. ಈ ಒಪ್ಪಂದದಲ್ಲಿ ವಿಶ್ವದ ಶೇ 25ರಷ್ಟು ಜಿಡಿಪಿ ಒಳಗೊಂಡಿದೆ. ಇದು ವಿಶ್ವದ ಮೂರನೇ ಒಂದರಷ್ಟು ವ್ಯಾಪಾರವಾಗಿದೆ ಎಂದು ಮೋದಿ ಹೇಳಿದ್ದಾರೆ.

‘ಇಂಡಿಯಾ ಎನರ್ಜಿ ವೀಕ್ 2026’ಇಂಧನ ಸುರಕ್ಷತೆ, ಸುಸ್ಥಿರತೆ ಮತ್ತು ಸಮಗ್ರ ಬೆಳವಣಿಗೆಯನ್ನು ಮುನ್ನಡೆಸಲು ನೀತಿ ನಿರೂಪಕರು, ಉದ್ಯಮದ ನಾಯಕರು ಮತ್ತು ನಾವೀನ್ಯಕಾರರನ್ನು ಒಗ್ಗೂಡಿಸುವ ಪ್ರಮುಖ ಜಾಗತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.