ನವದೆಹಲಿ: ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದದಲ್ಲಿ(ಎಫ್ಟಿಎ) ಆಮದು ಸುಂಕ ರಿಯಾಯಿತಿ ನೀಡಿರುವುದರಿಂದ, ದೇಶದ ಮಾರುಕಟ್ಟೆಯಲ್ಲಿ ‘ಯುರೋಪ್ ವೈನ್’ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ವ್ಯಾಪಾರ ಒಪ್ಪಂದದ ನಂತರ ಬೆಲೆಬಾಳುವ ಯುರೋಪ್ ವೈನ್ ಮೇಲಿನ ಆಮದು ಸುಂಕವು ಶೇ 150 ರಿಂದ ಶೇ 20ಕ್ಕೆ ಇಳಿಕೆಯಾಗಲಿದೆ. ₹271.98ಕ್ಕಿಂತ ಕಡಿಮೆ ಬೆಲೆಯ ವೈನ್ಗಳಿಗೆ ಆಮದು ಸುಂಕ ರಿಯಾಯಿತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಭಾರತದಿಂದ ಅತಿಹೆಚ್ಚು ರಫ್ತಾಗುವ ವಸ್ತುಗಳಲ್ಲಿ ವೈನ್ ಪ್ರಮುಖವಾಗಿದೆ, ಐರೋಪ್ಯ ಒಕ್ಕೂಟದ ದೇಶಗಳಿಗೆ ರಫ್ತಾಗುವ ವೈನ್ಗೂ ಆಮದು ಸುಂಕ ರಿಯಾಯಿತಿ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಯುರೋಪಿಯನ್ ವಿಸ್ಕಿ ಹಾಗೂ ದ್ರಾಕ್ಷಿಯ ಮೇಲೂ ಆಮದು ಸುಂಕ ರಿಯಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಕುರಿತು 2007ರಿಂದ ಮಾತುಕತೆಯಾಗುತ್ತಿದೆ. 18 ವರ್ಷಗಳ ನಂತರ, ‘ಎಫ್ಟಿಎ’ಗೆ ಸಹಿ ಬಿದಿದ್ದೆ. ಜವಳಿ, ಆಭರಣ, ಕರಕುಶಲ ವಸ್ತುಗಳು ಸೇರಿದಂತೆ ಹಲವು ವಸ್ತುಗಳಿಗೆ ಸುಂಕ ರಿಯಾಯಿತಿ ನೀಡಲಾಗಿದ್ದು, ಆ ವಸ್ತುಗಳ ಬೆಲೆ ಇಳಿಕೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.