ನವದೆಹಲಿ (ಪಿಟಿಐ/ಎಎಫ್ಪಿ): ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಮುಂದಿನ ಎರಡು ವರ್ಷಗಳಲ್ಲಿ 200 ಶತಕೋಟಿ ಡಾಲರ್ (ಅಂದಾಜು ₹18.13 ಲಕ್ಷ ಕೋಟಿ) ಹೂಡಿಕೆಯನ್ನು ನಿರೀಕ್ಷಿಸುತ್ತಿದೆ ಎಂದು ಕೇಂದ್ರ ಐ.ಟಿ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ಹೇಳಿದರು.

ಇಲ್ಲಿ ನಡೆಯುತ್ತಿರುವ ಎ.ಐ ಶೃಂಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘90 ಶತಕೋಟಿ ಡಾಲರ್ (₹8.16 ಲಕ್ಷ ಕೋಟಿ) ಹೂಡಿಕೆ ಮಾಡಲು ಕೆಲವು ಕಂಪನಿಗಳು ಈಗಾಗಲೇ ಬದ್ಧವಾಗಿವೆ’ ಎಂದರು.

‘ಎ.ಐ ತಂತ್ರಜ್ಞಾನದ ಸರಿಯಾದ ಮತ್ತು ನೈತಿಕ ಬಳಕೆಯ ಕುರಿತು ಜಾಗತಿಕ ನಾಯಕರಲ್ಲಿ ಒಮ್ಮತ ಮೂಡಿಸುವ ಕೆಲಸವನ್ನು ಭಾರತವು ಈ ಶೃಂಗದ ಮೂಲಕ ಮಾಡಲಿದೆ. ಹಾಗಾದಲ್ಲಿ, ಕೃತಕ ಬುದ್ಧಿಮತ್ತೆಯನ್ನು ಜನರ ಒಳಿತಿಗಾಗಿ ಬಳಸಬಹುದು ಹಾಗೂ ಅದರ ದುರ್ಬಳಕೆಯನ್ನು ತಡೆಗಟ್ಟಬಹುದು’ ಎಂದರು.

‘ಎ.ಐಗೆ ಸಂಬಂಧಿಸಿದ ‘ಕಾಮನ್ ಕಂಪ್ಯೂಟಿಂಗ್ ಲೇಯರ್’ನಲ್ಲಿ ನಾವು ಈಗಾಗಲೇ 38 ಸಾವಿರ ಗ್ರಾಫಿಕ್ಸ್ ಪ್ರೊಸೆಸಿಂಗ್ ಘಟಕಗಳನ್ನು (ಜಿಪಿಯು) ಬಳಸುತ್ತಿದ್ದೇವೆ. ಮುಂದಿನ ಒಂದು ವಾರದಲ್ಲಿ, ಸರ್ಕಾರವು 20 ಸಾವಿರ ಜಿಪಿಯುಗಳನ್ನು ಖರೀದಿಸಲಿದ್ದೇವೆ. ಅವುಗಳ ಅಳವಡಿಕೆ ಪ್ರಕ್ರಿಯೆ ಆರು ತಿಂಗಳಲ್ಲಿ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

‘ಎ.ಐ ನವೋದ್ಯಮಗಳು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಸಂಪನ್ಮೂಲಗಳನ್ನು ಒದಗಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಭಾರತವು ಕೃತಕ ಬುದ್ಧಿಮತ್ತೆಯ ಜಾಗತಿಕ ಕೇಂದ್ರವನ್ನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ’ ಎಂದು ಪ್ರತಿಪಾದಿಸಿದರು.

ಅದಾನಿ ಸಮೂಹ ಹೂಡಿಕೆ: 2035ರ ವೇಳೆಗೆ ‘ಹೈಪರ್ಸ್ಕೇಲ್ ಎ.ಐ–ರೆಡಿ ಡೇಟಾ ಸೆಂಟರ್’ಗಳನ್ನು ಅಭಿವೃದ್ಧಿಪಡಿಸಲು 100 ಶತಕೋಟಿ ಡಾಲರ್ (ಅಂದಾಜು ₹9.06 ಲಕ್ಷ ಕೋಟಿ) ಹೂಡಿಕೆ ಮಾಡಲು ಅದಾನಿ ಸಮೂಹ ಯೋಜಿಸಿದೆ. ಇದು ಜಾಗತಿಕ ಎ.ಐ ಹಬ್ ಆಗಬೇಕೆಂಬ ಭಾರತದ ಪ್ರಯತ್ನಕ್ಕೆ ಬಲ ತುಂಬಲಿದೆ.

ಡೀಪ್ಫೇಕ್ ದಿನದಿಂದ ದಿನಕ್ಕೆ ಬೃಹತ್ ಸಮಸ್ಯೆಯಾಗಿ ಬೆಳೆಯುತ್ತಿದೆ. ಇದರ ನಿಯಂತ್ರಣಕ್ಕೆ ಬಲವಾದ ಕ್ರಮ ಬೇಕು
ಅಶ್ವಿನಿ ವೈಷ್ಣವ್ ಕೇಂದ್ರ ಐ.ಟಿ ಸಚಿವ

‘ಮಕ್ಕಳಿಗೆ ನಿರ್ಬಂಧ:

ಚರ್ಚೆ’ ‘ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಮಕ್ಕಳಿಗೆ ನಿರ್ಬಂಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದರು. ‘ಸಾಮಾಜಿಕ ಮಾಧ್ಯಮಗಳ ಬಳಕೆಗೆ ವಯಸ್ಸಿನ ಆಧಾರದ ಮೇಲೆ ನಿಯಂತ್ರಣ ಇರಬೇಕೆಂದು ಅನೇಕ ದೇಶಗಳು ಈಗ ಒಪ್ಪಿಕೊಂಡಿವೆ. ಭಾರತ ಕೂಡಾ ವಯಸ್ಸಿನ ಆಧಾರದಲ್ಲಿ ನಿರ್ಬಂಧ ಹೇರುವ ಬಗ್ಗೆ ವಿವಿಧ ಸಾಮಾಜಿಕ ಮಾಧ್ಯಮ ಕಂಪನಿಗಳೊಂದಿಗೆ ಚರ್ಚಿಸುತ್ತಿದೆ’ ಎಂದರು. 16 ವರ್ಷದ ಒಳಗಿನ ಮಕ್ಕಳ ಸಾಮಾಜಿಕ ಮಾಧ್ಯಮ ವೇದಿಕೆಯ ಖಾತೆಗಳಿಗೆ ಆಸ್ಟ್ರೇಲಿಯಾ ಸರ್ಕಾರ ಕಳೆದ ಡಿಸೆಂಬರ್ನಲ್ಲಿ ನಿಷೇಧ ಹೇರಿತ್ತು. ಮಕ್ಕಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತೆಗೆದುಹಾಕುವಂತೆ ಟಿಕ್ಟಾಕ್ ಯೂಟ್ಯೂಬ್ ಮತ್ತು ಸ್ನ್ಯಾಪ್ಚಾಟ್ ಸೇರಿದಂತೆ ವಿವಿಧ ಕಂಪನಿಗಳಿಗೆ ಸೂಚಿಸಿತ್ತು. ಫ್ರಾನ್ಸ್ನಲ್ಲಿ ಸಂಸದರು 15 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಸೂದೆಯನ್ನು ಕಳೆದ ತಿಂಗಳು ಅಂಗೀಕರಿಸಿದ್ದರು. ಸೆನೆಟ್ನ ಒಪ್ಪಿಗೆ ದೊರೆತರೆ ಇದು ಕಾನೂನಾಗಿ ಬದಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.