ವಾರಾಣಸಿ: ಸ್ಥಳೀಯ ಕರೆನ್ಸಿಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಸಕ್ರಿಯವಾಗಿಸುವ ನಿಟ್ಟಿನಲ್ಲಿ ಭಾರತ ಮತ್ತು ಮಾರಿಷಸ್ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು (ಗುರುವಾರ) ತಿಳಿಸಿದ್ದಾರೆ.

ಭಾರತ ಪ್ರವಾಸದಲ್ಲಿರುವ ಮಾರಿಷಸ್ ಪ್ರಧಾನಿ ನವೀನ್ಚಂದ್ರ ರಾಮಗುಲಾಂ ಅವರನ್ನು ಭೇಟಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಉಭಯ ದೇಶಗಳ ನಡುವಣ ನಿಕಟ ಬಾಂಧವ್ಯವನ್ನು ಉಲ್ಲೇಖ ಮಾಡಿರುವ ಪ್ರಧಾನಿ ಮೋದಿ, ಎರಡೂ ರಾಷ್ಟ್ರಗಳ ಕನಸುಗಳು ಹಾಗೂ ಭವಿಷ್ಯವು ಒಂದೇ ಆಗಿದೆ ಎಂದು ತಿಳಿಸಿದ್ದಾರೆ.

ಹಿಂದೂ ಮಹಾಸಾಗರದಲ್ಲಿ ಉಭಯ ರಾಷ್ಟ್ರಗಳ ನಡುವೆ ಮುಕ್ತ, ಸುರಕ್ಷಿತ, ಸ್ಥಿರ ಮತ್ತು ಸಮೃದ್ಧದ ಸಮಾನ ಹಂಚಿಕೆಗೆ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಮಾರಿಷನ್ನ ವಿಶೇಷ ಆರ್ಥಿಕ ವಲಯದ ಭದ್ರತೆ ಹಾಗೂ ಸಾಗರ ಸಾಮರ್ಥ್ಯವನ್ನು ಬಲಪಡಿಸಲು ಭಾರತ ಬದ್ಧವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ವಸಾಹತುಶಾಹಿಯಿಂದ ಮುಕ್ತಗೊಂಡ ಮಾರಿಷಸ್ನ ಸಾರ್ವಭೌಮತ್ವವನ್ನು ಭಾರತ ಸದಾ ಬೆಂಬಲಿಸಿದೆ. ಅಲ್ಲದೆ ಸದಾ ಮಾರಿಷಸ್ ಪರವಾಗಿ ನಿಂತಿದೆ ಎಂದು ಪ್ರಧಾನಿ ಹೇಳಿದ್ದಾರೆ.
.ಸಾಮಾಜಿಕ ಜಾಲತಾಣಗಳಲ್ಲಿ PM ಮೋದಿ ಬಗ್ಗೆ AI ಫೋಟೊ, ವಿಡಿಯೊ ಹಾಕುತ್ತಿದ್ದವನ ಬಂಧನ.ಮತಕಳ್ಳತನದ 'ಹೈಡ್ರೋಜನ್ ಬಾಂಬ್' ಶೀಘ್ರ ಬಹಿರಂಗ: ರಾಹುಲ್ ಗಾಂಧಿ ಹೇಳಿದ್ದೇನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.