ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಅಗ್ನಿ ಪ್ರೈಮ್' ಕ್ಷಿಪಣಿಯ ರಾತ್ರಿ ಉಡಾವಣೆ ಯಶಸ್ವಿ ಪ್ರಯೋಗ

Published 4 ಏಪ್ರಿಲ್ 2024, 10:36 IST
Last Updated 4 ಏಪ್ರಿಲ್ 2024, 10:36 IST
ಅಕ್ಷರ ಗಾತ್ರ

ನವದೆಹಲಿ: ಅಣ್ವಸ್ತ್ರ ಸಾಮರ್ಥ್ಯದ ಹೊಸ ಪೀಳಿಗೆಯ ಖಂಡಾಂತರ ಕ್ಷಿಪಣಿ ‘ಅಗ್ನಿ ಪ್ರೈಮ್’ ರಾತ್ರಿ ಉಡಾವಣೆಯನ್ನು ಭಾರತವು ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಲ್ಲಿ ಯಶಸ್ವಿಯಾಗಿ ನೆರವೇರಿಸಿದ್ದು, ದೇಶದ ಶತ್ರು ನಿಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿದೆ.

ಬುಧವಾರ ರಾತ್ರಿ ಈ ಪರೀಕ್ಷಾರ್ಥ ಉಡಾವಣೆ ನಡೆದಿದ್ದು, ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾಗಿದ್ದ ವಿವಿಧ ಶ್ರೇಣಿಯ ಸಂವೇದಕಗಳಿಂದ ಸೆರೆಹಿಡಿಯಲಾದ ಡೇಟಾದಿಂದ ದೃಢೀಕರಿಸಲ್ಪಟ್ಟಂತೆ, ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸುವ ಪ್ರಯೋಗದ ಎಲ್ಲ ಉದ್ದೇಶಗಳನ್ನು ಅದು ಪೂರೈಸಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಜೊತೆ ಸೇನೆಯ ಕಾರ್ಯತಂತ್ರ ಸಿಬ್ಬಂದಿ ಈ ಉಡಾವಣೆ ಕೈಗೊಂಡಿತ್ತು. ಈ ಕ್ಷಿಪಣಿಯು ನೇರ ಶ್ರೇಣಿಯ 1,000–2,000 ಕಿ.ಮೀ ಗುರಿ ಭೇದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಸಂಬಂಧ ಡಿಆರ್‌ಡಿಒ ಮತ್ತು ಸಶಸ್ತ್ರ ಪಡೆಗಳನ್ನು ಅಭಿನಂದಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಈ ಖಂಡಾಂತರ ಕ್ಷಿಪಣಿಯ ಯಶಸ್ವಿ ಅಭಿವೃದ್ಧಿ ಮತ್ತು ಪರೀಕ್ಷೆಯು ಭಾರತೀಯ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದಿದ್ದಾರೆ.

ಸೇನಾಪಡೆಗಳ ಮುಖ್ಯಸ್ಥ ಜನರ್ ಅನಿಲ್ ಚೌಹಾಣ್, ಕಾರ್ಯತಂತ್ರ ಸೇನಾ ಪಡೆಗಳ ಮುಖ್ಯಸ್ಥ, ಭಾರತೀಯ ಸೇನೆ ಮತ್ತು ಡಿಆರ್‌ಡಿಒನ ಹಿರಿಯ ಅಧಿಕಾರಿಗಳು ಈ ಉಡಾವಣೆಗೆ ಸಾಕ್ಷಿಯಾದರು.

ಕಳೆದ ತಿಂಗಳು ‘ಮಿಷನ್ ದಿವ್ಯಸೂತ್ರ’ ಯೋಜನೆಯಡಿ ಸ್ವದೇಶಿ ನಿರ್ಮಿತ ಅಗ್ನಿ–5 ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು.

5,000 ಕಿ.ಮೀ ವರೆಗೆ ಕ್ರಮಿಸುವ ಸಾಮರ್ಥ್ಯ ಹೊಂದಿರುವ ಅಗ್ನಿ–5, ಬಹುತೇಕ ಉತ್ತರ ಚೀನಾ, ಯೂರೋಪ್‌ನ ಕೆಲ ಭಾಗಗಳು ಮತ್ತು ಸಂಪೂರ್ಣ ಏಷ್ಯಾ ಖಂಡವನ್ನು ತಲುಪಬಲ್ಲದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT