ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಂಬ ಉಡ್ಡಯನದ ಕ್ಷಿಪಣಿ ಪರೀಕ್ಷೆ ಯಶಸ್ವಿ: ಡಿಆರ್‌ಡಿಒ

Published : 13 ಸೆಪ್ಟೆಂಬರ್ 2024, 14:51 IST
Last Updated : 13 ಸೆಪ್ಟೆಂಬರ್ 2024, 14:51 IST
ಫಾಲೋ ಮಾಡಿ
Comments

ಬಾಲೇಶ್ವರ (ಒಡಿಶಾ): ‘ಲಂಬ ಉಡ್ಡಯನದ – ಕಡಿಮೆ ವ್ಯಾಪ್ತಿಯ, ನೆಲದಿಂದ ಆಗಸದ ಗುರಿಗೆ ದಾಳಿ ನಡೆಸುವ’ (ವಿಎಲ್‌–ಎಸ್‌ಆರ್‌ಎಸ್‌ಎಎಂ) ಕ್ಷಿಪಣಿಯ ಪರೀಕ್ಷೆಯು ಶುಕ್ರವಾರ ಯಶಸ್ವಿಯಾಗಿ ನಡೆದಿದೆ. ಒಡಿಶಾ ಕರಾವಳಿಯ ಚಂಡೀಪುರದಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಈ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಗುರುವಾರವೂ ನಡೆದಿತ್ತು.

ಎರಡೂ ಪರೀಕ್ಷೆಗಳು ಯಶಸ್ಸು ಕಂಡಿವೆ ಎಂಬುದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಪ್ರಕಟಣೆಯು ತಿಳಿಸಿದೆ. ಎರಡೂ ಪರೀಕ್ಷೆಗಳಲ್ಲಿ ಈ ಕ್ಷಿಪಣಿಯು, ಸಮುದ್ರದ ಮಟ್ಟಕ್ಕೆ ಬಹಳ ಸನಿಹದಲ್ಲಿ ತೀವ್ರ ವೇಗದಿಂದ ಸಾಗುತ್ತಿದ್ದ ಗುರಿಯೊಂದನ್ನು ಯಶಸ್ವಿಯಾಗಿ ಧ್ವಂಸಗೊಳಿಸಿದೆ ಎಂದು ಹೇಳಿಕೆಯು ತಿಳಿಸಿದೆ.

ನಿಖರವಾಗಿ ದಾಳಿ ನಡೆಸುವ ಹಾಗೂ ಗುರಿಯನ್ನು ಧ್ವಂಸಗೊಳಿಸುವ ಸಾಮರ್ಥ್ಯವನ್ನು ಕ್ಷಿಪಣಿಯು ತೋರಿಸಿಕೊಟ್ಟಿದೆ ಎಂದು ಅದು ಹೇಳಿದೆ.

ಕ್ಷಿಪಣಿಯ ಪರೀಕ್ಷೆ ಯಶಸ್ಸು ಕಂಡಿರುವುದಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಡಿಆರ್‌ಡಿಒ, ಭಾರತೀಯ ನೌಕಾಪಡೆ ಮತ್ತು ಈ ಪ್ರಯೋಗದಲ್ಲಿ ಭಾಗಿಯಾಗಿದ್ದ ಎಲ್ಲ ತಂಡಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸುರಕ್ಷತೆಯ ದೃಷ್ಟಿಯಿಂದ ಬಾಲೇಶ್ವರ ಜಿಲ್ಲಾ ಆಡಳಿತವು, ಕ್ಷಿಪಣಿ ಪರೀಕ್ಷಾ ಕೇಂದ್ರದ 2.5 ಕಿ.ಮೀ. ಸುತ್ತಳತೆ ಪ್ರದೇಶದಲ್ಲಿನ ಆರು ಗ್ರಾಮಗಳ 3,100 ಜನರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT