ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೆಮಿಕಂಡಕ್ಟರ್ ಉದ್ಯಮದಲ್ಲಿ ಸಹಭಾಗಿತ್ವಕ್ಕೆ ಭಾರತ–ಅಮೆರಿಕ ಒಪ್ಪಿಗೆ

Published 18 ಜೂನ್ 2024, 3:05 IST
Last Updated 18 ಜೂನ್ 2024, 3:05 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಢೋಬಾಲ್ ಮತ್ತು ಅಮೆರಿಕದ ಎನ್‌ಎಸ್‌ಎ ಜೇಕ್ ಸುಲ್ಲಿವನ್ ನಡುವೆ ನಡೆದ ಎಮರ್ಜಿಂಗ್ ಟೆಕ್ನಾಲಜಿ (ಐಸಿಇಟಿ) ಕುರಿತ ಸಭೆಯಲ್ಲಿ ಪೂರೈಕೆ ಸರಪಳಿ, ಸೆಮಿಕಂಡಕ್ಟರ್‌ಗಳು ಮತ್ತು ನಿರ್ಣಾಯಕ ಖನಿಜಗಳ ಕುರಿತ ನಿಕಟ ವ್ಯವಹಾರ ಮತ್ತು ಸಹಕಾರಕ್ಕೆ ಭಾರತ ಮತ್ತು ಅಮೆರಿಕ ಒಪ್ಪಿಗೆ ಸೂಚಿಸಿವೆ. .

ಸೆಮಿಕಂಡಕ್ಟರ್ (ರಕ್ಷಣೆ, ಆಟೊಮೊಬೈಲ್ಸ್ ಮತ್ತು ಟೆಲಿಕಮ್ಯುನಿಕೇಶನ್‌ ವಲಯಗಳಿಗೆ ಅತ್ಯಂತ ಅವಶ್ಯಕ) ಉದ್ಯಮವು ಬಹುದೊಡ್ಡ ಜಿಯೊಪೊಲಿಟಿಕಲ್ ಸ್ಪರ್ಧೆಯ ಕ್ಷೇತ್ರವಾಗಿದ್ದು, ಈ ವಲಯದಲ್ಲಿ ತಮ್ಮ ಪ್ರಾದೇಶಿಕ ಸಾಮರ್ಥ್ಯವನ್ನು ವೃದ್ಧಿಸಲು ಅಮೆರಿಕ, ಜಪಾನ್ ಮತ್ತು ಚೀನಾ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿವೆ.

‘ಅಮೆರಿಕದ ಸೆಮಿಕಂಡಕ್ಟರ್ ಇಂಡಸ್ಟ್ರಿ ಅಸೋಸಿಯೇಷನ್ ​​​​ಮತ್ತು ಭಾರತದ ಎಲೆಕ್ಟ್ರಾನಿಕ್ಸ್ ಸೆಮಿಕಂಡಕ್ಟರ್ ಅಸೋಸಿಯೇಷನ್ ​​ನಡುವಿನ ಪಾಲುದಾರಿಕೆಯ ಮೂಲಕ ಜಂಟಿ ಸೆಮಿಕಂಡಕ್ಟರ್ ಉತ್ಪಾದನೆಯು ಮುಂಬರುವ ಉದ್ಯಮದ ಅವಕಾಶಗಳನ್ನು ಗುರುತಿಸುತ್ತದೆ ಮತ್ತು ಪೂರಕ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗಳ ದೀರ್ಘಾವಧಿಯ ಕಾರ್ಯತಂತ್ರದ ಅಭಿವೃದ್ಧಿಯನ್ನು ಸುಗಮಗೊಳಿಸುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.

ಭಾರತದಲ್ಲಿನ ಸೆಮಿಕಂಡಕ್ಟರ್ ಉದ್ಯಮದ ಕುರಿತಂತೆ ಭಾರತ ಮತ್ತು ಅಮೆರಿಕದ ಹೂಡಿಕೆದಾರರೊಂದಿಗಿನ ಒಪ್ಪಂದವು ಭಾರತದ ದೃಢವಾದ ಸೆಮಿಕಂಡಕ್ಟರ್ ಮತ್ತು ಮಾಹಿತಿ ಸಂವಹನ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದನ್ನು ಮುಂದುವರಿಸುವ ಗುರಿಯನ್ನು ಹೊಂದಿದೆ.

ಗಮನಾರ್ಹವಾಗಿ, ಭಾರತವು ಮಾರ್ಚ್‌ನಲ್ಲಿ ಮೂರು ಸೆಮಿಕಂಡಕ್ಟರ್ ಸ್ಥಾವರ ನಿರ್ಮಾಣದ ಪ್ರಸ್ತಾವನೆಗಳನ್ನು ಅನುಮೋದಿಸಿದೆ. ಇದು ಭಾರತದ ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಈ ಯೋಜನೆಗಳು ₹1.26 ಲಕ್ಷ ಕೋಟಿ ಅಂದಾಜು ಹೂಡಿಕೆಯನ್ನು ಒಳಗೊಂಡಿವೆ. ಇದರಿಂದ ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯಕ್ಕೆ ಗಣನೀಯ ಕೊಡುಗೆಯನ್ನು ನಿರೀಕ್ಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT