ನವದೆಹಲಿ : ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಪಠ್ಯವನ್ನು ಅಂತಿಮಗೊಳಿಸಲು ಸೋಮವಾರದಿಂದ ಆರಂಭವಾಗಬೇಕಿದ್ದ ಮಾತುಕತೆಯನ್ನು ಭಾರತ ಮತ್ತು ಅಮೆರಿಕದ ಅಧಿಕಾರಿಗಳು ಮರುನಿಗದಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾತುಕತೆಯು ವಾಷಿಂಗ್ಟನ್ನಲ್ಲಿ ಸೋಮವಾರದಿಂದ ಮೂರು ದಿನ ನಡೆಯಬೇಕಿತ್ತು.

ಕೇಂದ್ರ ಸರ್ಕಾರದ ವಾಣಿಜ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ದರ್ಪಣ್ ಜೈನ್ ಅವರು ಭಾರತದ ತಂಡದ ನೇತೃತ್ವ ವಹಿಸಿದ್ದಾರೆ.

‘ಈಚಿನ ಬೆಳವಣಿಗೆಗಳನ್ನು ಮತ್ತು ಅವುಗಳ ಪರಿಣಾಮವನ್ನು ಪರಿಶೀಲಿಸಲು ಎರಡೂ ಕಡೆಯವರಿಗೆ ಸಮಯ ಸಿಕ್ಕ ನಂತರದಲ್ಲಿ ಭಾರತದ ಅಧಿಕಾರಿಗಳ ತಂಡದ ಭೇಟಿಯನ್ನು ನಿಗದಿ ಮಾಡ ಬಹುದು ಎಂಬ ಅನಿಸಿಕೆಯನ್ನು ಎರಡೂ ದೇಶಗಳು ಅಧಿಕಾರಿಗಳು ಹೊಂದಿದ್ದಾರೆ. ಎರಡೂ ಕಡೆಯವರಿಗೆ ಹೊಂದಿಕೆ ಆಗುವ ಸಮಯದಲ್ಲಿ ಮಾತುಕತೆ ನಡೆಸಲಾಗುತ್ತದೆ’ ಎಂದು ವಾಣಿಜ್ಯ ಸಚಿವಾಲಯದ ಮೂಲಗಳು ಹೇಳಿವೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿದೇಶಗಳಿಂದ ಆಮದು ಆಗುವ ಸರಕುಗಳ ಮೇಲೆ ವಿಧಿಸಿದ್ದ ಸುಂಕವನ್ನು ಅಲ್ಲಿನ ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಿದೆ. ಇದಾದ ನಂತರ ಟ್ರಂಪ್ ಅವರು ಎಲ್ಲ ದೇಶಗಳ ಸರಕುಗಳ ಮೇಲೆ ಶೇ 10ರಷ್ಟು ಸುಂಕ ವಿಧಿಸಿದರು. ನಂತರ ಸುಂಕವನ್ನು ಶೇ 15ಕ್ಕೆ ಹೆಚ್ಚಳ ಮಾಡುವುದಾಗಿಯೂ ಅವರು ಪ್ರಕಟಿಸಿದ್ದಾರೆ.

ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರಗಳ ಕಾಯ್ದೆಯ ಅಡಿಯಲ್ಲಿ ಸುಂಕವನ್ನು ವಿಧಿಸಿದ ಟ್ರಂಪ್ ಅವರ ಕ್ರಮವು ಅಧಿಕಾರ ವ್ಯಾಪ್ತಿಯ ಉಲ್ಲಂಘನೆ ಎಂದು ಅಮೆರಿಕದ ಸುಪ್ರೀಂ ಕೋರ್ಟ್ ಬಹುಮತದ ತೀರ್ಪಿನಲ್ಲಿ ಹೇಳಿದೆ.

ಅಮೆರಿಕವು ಭಾರತದ ಮೇಲೆ 2025ರ ಆಗಸ್ಟ್ನಲ್ಲಿ ಶೇ 25ರಷ್ಟು ಪ್ರತಿಸುಂಕ ಹೇರಿತು. ನಂತರ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಕಾರಣಕ್ಕೆ ಶೇ 25ರಷ್ಟು ಹೆಚ್ಚುವರಿ ಸುಂಕವನ್ನು ದಂಡದ ರೂಪದಲ್ಲಿ ವಿಧಿಸಿತ್ತು. ಇದ ರಿಂದಾಗಿ ಭಾರತದ ಸರಕುಗಳ ಮೇಲಿನ ಒಟ್ಟು ಸುಂಕವು ಶೇ 50ರಷ್ಟು ಆಗಿತ್ತು.

ಆದರೆ, ಮಧ್ಯಂತರ ವ್ಯಾಪಾರ ಒಪ್ಪಂದವೊಂದಕ್ಕೆ ಅಂತಿಮ ರೂಪ ನೀಡಲು ಭಾರತ ಮತ್ತು ಅಮೆರಿಕ ಈ ತಿಂಗಳ ಆರಂಭದಲ್ಲಿ ಒಪ್ಪಿವೆ. ಇದರ ಅನ್ವಯ ಭಾರತದ ಸರಕುಗಳ ಮೇಲಿನ ಸುಂಕವು ಶೇ 18ಕ್ಕೆ ಇಳಿಕೆ ಆಗಲಿದೆ. ಈವರೆಗೆ ಅಮೆರಿಕವು ಭಾರತದ ಸರಕುಗಳ ಮೇಲಿನ ಶೇ 25ರಷ್ಟು ದಂಡ ಸುಂಕವನ್ನು ತೆಗೆದಿದೆ. ಶೇ 25ರಷ್ಟು ಪ್ರತಿಸುಂಕವು ಜಾರಿಯಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.