ನವದೆಹಲಿ: ಭಾರತದ ವ್ಯಾಪ್ತಿಯ ಸಮುದ್ರದ ಮೇಲೆ ನಿಗಾ ಇಡುವ ಉದ್ದೇಶದಿಂದ ಅಮೆರಿಕದ ರಕ್ಷಣಾ ಉಪಕರಣಗಳ ಉತ್ಪಾದನಾ ಕಂಪನಿ ಜನರಲ್ ಆಟೋಮಿಕ್ಸ್ ನಿಂದ ಭಾರತೀಯ ನೌಕಾಪಡೆಯು ಎರಡು ಡ್ರೋನ್‌ಗಳನ್ನು ಗುತ್ತಿಗೆ ಮೇಲೆ ಪಡೆದಿದೆ.

ಅಗತ್ಯಬಿದ್ದಲ್ಲಿ ಈ ಡ್ರೋನ್‌ಗಳನ್ನು ಲಡಾಖ್ ಪ್ರದೇಶದಲ್ಲೂ ಈ ಮಾನವರಹಿತ ನೌಕೆಯನ್ನು(ಯುಎವಿ) ನಿಯೋಜಿಸಬಹುದು ಎಂದು ಮೂಲಗಳು ತಿಳಿಸಿವೆ. ಶಸ್ತ್ರ ರಹಿತ ಎಂಕ್ಯು–9ಬಿ ಸೀ ಗಾರ್ಡಿಯನ್ ಡ್ರೋನ್‌ಗಳನ್ನು ಒಂದು ವರ್ಷಕ್ಕೆ ಭೋಗ್ಯಕ್ಕೆ ಪಡೆಯಲಾಗಿದ್ದು, ಇನ್ನೊಂದು ವರ್ಷಕ್ಕೆ ವಿಸ್ತರಣೆ ಮಾಡುವಂಥ ಆಯ್ಕೆಯೊಂದಿಗೆ ಪಡೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರತದ ಸಮುದ್ರ ವ್ಯಾಪ್ತಿಯಲ್ಲಿ(ಇಂಡಿಯನ್ ಓಷಿಯನ್ ರೀಜಿಯನ್) ತನ್ನ ಕಣ್ಗಾವಲು ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ 30 ಶಸ್ತ್ರ ಸಹಿತ ಸೀ ಗಾರ್ಡಿಯನ್ ಡ್ರೋನ್‌ಗಳನ್ನು ಅಮೆರಿಕದಿಂದ ಖರೀದಿಸುವುದಕ್ಕೆ ಭಾರತೀಯ ನೌಕಾಪಡೆಯು ಚಿಂತನೆ ನಡೆಸುತ್ತಿದ್ದು, ಇದರ ಬೆನ್ನಲ್ಲೇ ಗುತ್ತಿಗೆ ಮೇಲೆ ಎರಡು ಅತ್ಯಾಧುನಿಕ ಡ್ರೋನ್‌ಗಳನ್ನು ಪಡೆಯಲಾಗಿದೆ. ಈ ತಿಂಗಳ ಆರಂಭದಲ್ಲಿ ಇವುಗಳು ತಮಿಳುನಾಡಿನ ನೌಕಾಪಡೆ ವಾಯುನೆಲೆಗೆ ಬಂದಿಳಿದಿವೆ.

ಕಳೆದ ಸೆಪ್ಟೆಂಬರ್‌ನಲ್ಲಿ ನೂತನ ರಕ್ಷಣಾ ಉಪಕರಣಗಳ ಖರೀದಿ ಪ್ರಕ್ರಿಯೆಯನ್ನು(ಡಿಎಪಿ) ಸರ್ಕಾರ ಬಿಡುಗಡೆಗೊಳಿಸಿತ್ತು. ಇದರ ಅನ್ವಯ ವಿದೇಶಗಳಿಂದ, ಗುತ್ತಿಗೆ ಆಧಾರದ ಮೇಲೆ ಸೇನಾ ಉಪಕರಣಗಳನ್ನು, ಹೆಲಿಕಾಪ್ಟರ್, ಯುಎವಿಗಳನ್ನು ಪಡೆಯಲು ಮೂರೂ ಸೇನೆಗಳಿಗೂ ಅವಕಾಶ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.