ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮೇಶ್ವರಂ: ನೂತನ ಪಂಬನ್ ಸೇತುವೆ ಕಾಮಗಾರಿ ಆರಂಭಿಸಿದ ರೈಲ್ವೆ ಇಲಾಖೆ

Last Updated 1 ಜುಲೈ 2020, 9:53 IST
ಅಕ್ಷರ ಗಾತ್ರ

ರಾಮನಾಥಪುರಂ(ತಮಿಳುನಾಡು): ಭಾರತೀಯ ರೈಲ್ವೆ ಇಲಾಖೆಯ ವತಿಯಿಂದ ರಾಮೇಶ್ವರಂನ ಪಂಬನ್‌ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸೇತುವೆಗೆ ಮೊದಲ ಆಧಾರ ಸ್ಥಂಭ ನಿರ್ಮಾಣಕ್ಕೆ ಅಡಿಪಾಯ ಹಾಕುವ ಕಾರ್ಯವನ್ನು ಬುಧವಾರ ಆರಂಭಿಸಲಾಯಿತು.

ಭಾರಿ ಗಾತ್ರದ ಯಂತ್ರಗಳನ್ನು ಸಮುದ್ರಕ್ಕೆ ಇಳಿಸಿದ್ದು, ಕೆಲಸ ಆರಂಭಿಸಿದೆ. ನಿರೀಕ್ಷೆಯಂತೆ ಕೆಲಸ ನಡೆದರೆ ನಾಲ್ಕು ವರ್ಷಗಳ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುತ್ತದೆ. ₹250 ಕೋಟಿ ವೆಚ್ಚ ತಗಲುವ ಈ ಯೋಜನೆಯಿಂದ ಹಲವು ಉಪಯೋಗಗಳಿವೆ ಎಂದು ಇಲಾಖೆ ತಿಳಿಸಿದೆ.

ಈಗಿರುವ 104 ವರ್ಷಗಳ ಹಳೆಯ ಸೇತುವೆ ಪಕ್ಕದಲ್ಲಿಯೇ ನಿರ್ಮಾಣವಾಗುತ್ತಿರುವ ಈ ಸೇತುವೆಯಲ್ಲಿ ವರ್ಟಿಕಲ್ ಲಿಫ್ಟ್ ಅಳವಡಿಸಲಾಗುವುದು. ಆ ಮೂಲಕ ಹಡಗುಗಳು, ಯಾಂತ್ರಿಕ ದೋಣಿಗಳಿಗೆ ನೂತನ ತಂತ್ರಜ್ಞಾನದಂತೆ ದಾರಿ ಸುಗಮ ಮಾಡಿಕೊಡಲಾಗುತ್ತದೆ ಎನ್ನಲಾಗಿದೆ. ಈಗಿರುವ ಹಳೆಯ ರೈಲು ಮಾರ್ಗದಲ್ಲಿ ಸರಕು ಸಾಗಾಣಿಕೆ ಕಷ್ಟ. ಆದರೆ, ಹೊಸ ಸೇತುವೆಯಲ್ಲಿ ಹೆಚ್ಚಿನ ಸರಕು ಸಾಗಾಣಿಕೆ ಮಾಡಲು ಸುಲಭವಾಗಿ ಅವಕಾಶವಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT