ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಸಾ ರಹಿತವಾಗಿ ಭಾರತೀಯರು ಥಾಯ್ಲೆಂಡ್‌ಗೆ ತೆರಳಲು ಅವಕಾಶ

Published 31 ಅಕ್ಟೋಬರ್ 2023, 10:35 IST
Last Updated 31 ಅಕ್ಟೋಬರ್ 2023, 10:35 IST
ಅಕ್ಷರ ಗಾತ್ರ

ನವದೆಹಲಿ: ನವೆಂಬರ್ 10ರಿಂದ ಮುಂದಿನ ವರ್ಷದ ಮೇ 10ರವರೆಗೆ ಭಾರತೀಯರು ವೀಸಾ ಇಲ್ಲದಿದ್ದರೂ ಥಾಯ್ಲೆಂಡ್‌ಗೆ ತೆರಳಲು ಅವಕಾಶ ನೀಡಲಾಗಿದೆ. ಪ್ರವಾಸೋದ್ಯಮ ಉತ್ತೇಜಿಸುವ ದೃಷ್ಟಿಯಿಂದ ಥಾಯ್ಲೆಂಡ್‌ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಭಾರತವು ಥಾಯ್ಲೆಂಡ್‌ಗೆ ಪ್ರಮುಖ ಪ್ರವಾಸೋದ್ಯಮ ಮೂಲವಾಗಿದೆ.

ನವೆಂಬರ್ 10, 2023ರಿಂದ ಮೇ 10, 2024ರ ಅವಧಿಯಲ್ಲಿ ಭಾರತೀಯರು ಥಾಯ್ಲೆಂಡ್‌ಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು. ಒಂದು ಪ್ರವೇಶದಲ್ಲಿ ಒಬ್ಬ ವ್ಯಕ್ತಿಯು 30 ದಿನಗಳವರೆಗೆ ಉಳಿಯಬಹುದು, ಥಾಯ್ಲೆಂಡ್‌ ಪ್ರವಾಸೋದ್ಯಮ ಪ್ರಾಧಿಕಾರದ ದೆಹಲಿ ಕಚೇರಿಯ ನಿರ್ದೇಶಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT