ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿ, ಕಾಂಗ್ರೆಸ್‌ನ ಮಾಜಿ ಸಂಸದ ನವೀನ್‌ ಜಿಂದಾಲ್‌ ಬಿಜೆಪಿಗೆ

Published 24 ಮಾರ್ಚ್ 2024, 16:02 IST
Last Updated 24 ಮಾರ್ಚ್ 2024, 16:02 IST
ಅಕ್ಷರ ಗಾತ್ರ

ನವದೆಹಲಿ: ಉದ್ಯಮಿ, ಕಾಂಗ್ರೆಸ್‌ನ ಮಾಜಿ ಸಂಸದ ನವೀನ್ ಜಿಂದಾಲ್ ಅವರು ‘ಕೈ’ಗೆ ಗುಡ್‌ಬೈ ಹೇಳಿ ಭಾನುವಾರ ಬಿಜೆಪಿ ಸೇರಿದರು. 

ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ ಪರಿಕಲ್ಪನೆಗೆ ಕೊಡುಗೆ ನೀಡುವ ಉದ್ದೇಶದಿಂದ ಬಿಜೆಪಿ ಸೇರಿರುವುದಾಗಿ ಅವರು ಹೇಳಿದ್ದಾರೆ. ಜಿಂದಾಲ್‌ ಅವರು 2004 ರಿಂದ 2014ರ ಅವಧಿಯಲ್ಲಿ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು.

ಹರಿಯಾಣ ಸಚಿವ ಬಿಜೆಪಿಗೆ

(ಚಂಡೀಗಢ ವರದಿ): ಹರಿಯಾಣದ ಪಕ್ಷೇತರ ಶಾಸಕ ಮತ್ತು ಸಚಿವರೂ ಆಗಿರುವ ರಂಜಿತ್‌ ಸಿಂಗ್‌ ಚೌಟಾಲ ಅವರು ಭಾನುವಾರ ಬಿಜೆಪಿ ಸೇರಿದರು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದರು. ಬಿಜೆಪಿಯು ಅವರನ್ನು ಹಿಸಾರ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಚಿಂತನೆ ನಡೆಸಿದೆ ಎಂದು ಮೂಲಗಳು ಹೇಳಿವೆ.

ಶಿವಸೇನಾ ಸೇರಿದ ಕಾಂಗ್ರೆಸ್‌ ಶಾಸಕ (ಮುಂಬೈ ವರದಿ): ನಾಗಪುರ ಜಿಲ್ಲೆಯ ಉಮ್ರೇಡ್‌ ಶಾಸಕ ರಾಜು ಪರ್ವೆ ಅವರು ಭಾನುವಾರ ಕಾಂಗ್ರೆಸ್‌ ತೊರೆದು, ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಸೇರಿದರು. ಲೋಕಸಭಾ ಚುನಾವಣೆಯಲ್ಲಿ ಅವರನ್ನು ರಾಮ್ಟೆಕ್‌ ಕ್ಷೇತ್ರದಲ್ಲಿ, ಕಾಂಗ್ರೆಸ್‌ನ ರಶ್ಮಿ ಬಾರ್ವೆ ವಿರುದ್ದ ಕಣಕ್ಕಿಳಿಸುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT