ಏನಿದು ವಿವಾದ?: ಔರಂಗಾಬಾದ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಚಿವ ಪಾಟೀಲ್, ‘ಅಂಬೇಡ್ಕರ್ ಮತ್ತು ಫುಲೆ ಅವರು ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಸರ್ಕಾರದ ಅನುದಾನ ಕೇಳಿರಲಿಲ್ಲ, ಶಾಲೆ ಮತ್ತು ಕಾಲೇಜುಗಳನ್ನು ಆರಂಭಿಸಲು ನಿಧಿ ಸಂಗ್ರಹಕ್ಕಾಗಿ ಅವರು ಜನರಿಂದ ಭಿಕ್ಷೆ ಬೇಡಿದ್ದರು’ ಎಂದು ಹೇಳಿದ್ದರು. ಅವರು ಬಳಸಿದ ‘ಭಿಕ್ಷೆ’ ಪದ ವಿವಾದಕ್ಕ ಕಾರಣವಾಗಿತ್ತು.