ನವದೆಹಲಿ: ‘ಭಯೋತ್ಪಾದನೆ ವಿರುದ್ಧ ಭಾರತದ ನಿಲುವನ್ನು ಜಗತ್ತಿನಾದ್ಯಂತ ತಲುಪಿಸುವ ಯೋಜನೆಯ ಭಾಗವಾಗಿ ಕೆಲಸ ಮಾಡುತ್ತಿದ್ದರೆ, ಭಾರತದಲ್ಲಿ ಕೂತು ಇದರಿಂದಾಗುವ ರಾಜಕೀಯ ಲಾಭದ ಲೆಕ್ಕಾಚಾರವನ್ನು ಹಾಕಲಾಗುತ್ತಿದೆ. ದೇಶಭಕ್ತನಾಗಿರುವುದು ಇಷ್ಟೊಂದು ಕಠಿಣವೇ?’ ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಸೋಮವಾರ ಹೇಳಿದರು.

ತಮ್ಮ ‘ಎಕ್ಸ್’ ಖಾತೆ ಮೂಲಕ ಖುರ್ಷಿದ್ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಖುರ್ಷಿದ್ ಅವರು ಜೆಡಿಯು ಸಂಸದ ಸಂಜಯ್ ಕುಮಾರ್ ಝಾ ಅವರ ನೇತೃತ್ವದ ನಿಯೋಗದ ಸದಸ್ಯರಾಗಿದ್ದಾರೆ. ಸದ್ಯ ಈ ನಿಯೋಗವು ಮಲೇಷ್ಯಾದಲ್ಲಿ ಇದೆ.

ಇಂಡೊನೇಷ್ಯಾದಲ್ಲಿ ಚಿಂತಕರ ಛಾವಡಿಯೊಂದಿಗಿನ ಸಭೆಯಲ್ಲಿ ಮಾತನಾಡಿದ್ದ ಖುರ್ಷಿದ್ ಅವರು, ‘ಹಲವು ವರ್ಷಗಳವರೆಗೆ ಕಾಶ್ಮೀರದಲ್ಲಿ ಅನೇಕ ಮುಖ್ಯ ಸಮಸ್ಯೆಗಳಿದ್ದವು. ಸಂವಿಧಾನದ 370ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಬಳಿಕ ಈ ಎಲ್ಲ ಸಮಸ್ಯೆಗಳು ಅಂತ್ಯಗೊಂಡವು’ ಎಂದಿದ್ದರು.

ಈ ಹೇಳಿಕೆಯು ಭಾರತದಲ್ಲಿ ರಾಜಕೀಯ ಹೇಳಿಕೆ–ಪ್ರತಿಹೇಳಿಕೆಗೆ ಕಾರಣವಾಗಿತ್ತು. ಬಿಜೆಪಿಯು ಖುರ್ಷಿದ್ ಅವರ ಹೇಳಿಕೆಯನ್ನು ಬೆಂಬಲಿಸಿತ್ತು. ವಿದೇಶಗಳಲ್ಲಿ ನಿಯೋಗದ ಸಭೆಗಳಲ್ಲಿ ಶಶಿ ತರೂರ್ ಅವರು ನೀಡಿದ ಹಲವು ಹೇಳಿಕೆಗಳೂ ಭಾರತದಲ್ಲಿ ವಿವಾದ ಸ್ವರೂಪ ಪಡೆದುಕೊಂಡಿದ್ದವು. ಕಾಂಗ್ರೆಸ್ ನಾಯಕರು ತರೂರ್ ಅವರ ವಿರುದ್ಧ ಮಾತನಾಡಿದ್ದರು.

ತರೂರ್ ಮನೀಷ್ ತಿವಾರಿ ನಂತರ ಈಗ ಇನ್ನೊಬ್ಬ ಕಾಂಗ್ರೆಸ್ ನಾಯಕ ಸತ್ಯವನ್ನು ಹೇಳಿ ಪಕ್ಷಕ್ಕೆ ಮತ್ತು ‘ಇಂಡಿಯಾ’ ಮೈತ್ರಿಕೂಟಕ್ಕೆ ಕನ್ನಡಿ ಹಿಡಿದಿದ್ದಾರೆ. ಖುರ್ಷಿದ್ ಅವರು ಭಾರತಕ್ಕೆ ಆದ್ಯತೆ ನೀಡಿದರು. ಇದಕ್ಕಾಗಿ ಅವರನ್ನು ಯಾವುದೇ ಪಕ್ಷದ ಸೂಪರ್ ವಕ್ತಾರ ಎಂದು ಕರೆಯುವುದಿಲ್ಲ ಎಂದುಕೊಳ್ಳುತ್ತೇವೆ
ಶೆಹಜಾದ್ ಪೂನಾವಾಲ ಬಿಜೆಪಿ ರಾಷ್ಟ್ರೀಯ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.