ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ನಾಯಕ ಮಿಲಿಂದ್‌ ದಿಯೋರಾ ಮುನಿಸು?: ಪಕ್ಷಕ್ಕೆ ಆಹ್ವಾನಿಸಿದ ಶಿಂದೆ

Published 13 ಜನವರಿ 2024, 16:33 IST
Last Updated 13 ಜನವರಿ 2024, 16:33 IST
ಅಕ್ಷರ ಗಾತ್ರ

ಮುಂಬೈ: ಕಾಂಗ್ರೆಸ್‌ ನಾಯಕ, ಮಾಜಿ ಸಂಸದ ಮಿಲಿಂದ್‌ ದಿಯೋರಾ ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳ ನಡುವೆಯೇ, ಪಕ್ಷಕ್ಕೆ ಬರುವಂತೆ ಏಕನಾಥ ಶಿಂದೆ ನೇತೃತ್ವದ ಶಿವಸೇನೇಯು ಅವರಿಗೆ ಬಹಿರಂಗ ಆಹ್ವಾನ ನೀಡಿದೆ.

ಮಿಲಿಂದ್‌ ದಿಯೋರಾ ಅವರು ಕಾಂಗ್ರೆಸ್‌ನ ಹಿರಿಯ ನಾಯಕ, ಏಳು ಬಾರಿಯ ಸಂಸದರಾಗಿದ್ದ ಮುರುಳಿ ದಿಯೋರಾ ಅವರ ಮಗ. ದಿಯೋರಾ ಕುಟುಂಬವು ಸೋನಿಯಾ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆ ವಿಚಾರವಾಗಿ ಮಿಲಿಂದ್‌ ಕಾಂಗ್ರೆಸ್‌ ಜತೆಗೆ ಮುನಿಸಿಕೊಂಡಿದ್ದಾರೆ ಎಂಬ ವಿಷಯ ‘ಮಹಾವಿಕಾಸ ಅಘಾಡಿ’ ಮೈತ್ರಿಕೂಟದಲ್ಲಿ ಕೇಳಿಬರುತ್ತಿದೆ. 

ಮಿಲಿಂದ್‌ ದಿಯೋರಾ ಅವರು ಶನಿವಾರ ತಮ್ಮ ಬೆಂಬಲಿಗರ ಸಭೆ ನಡೆಸಿದರು. ಈ ಮೂಲಕ ಅವರ ಅಸಮಾಧಾನ ಬಹಿರಂಗಗೊಂಡಿದೆ. ಆದರೆ, ಮಿಲಿಂದ್‌ ಇದುವರೆಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ.

ಮಿಲಿಂದ್‌ ಮುನಿಸಿನ ಲಾಭ ಪಡೆಯಲು ಏಕನಾಥ ಶಿಂದೆ ನೇತೃತ್ವದ ಶಿವಸೇನೆ ಪ್ರಯತ್ನಿಸಿದೆ. ಪಕ್ಷ ಸೇರುವಂತೆ ಅವರಿಗೆ ಬಹಿರಂಗ ಆಹ್ವಾನ ನೀಡಿದೆ. ಈ ಕುರಿತು ಮಾತನಾಡಿರುವ ಸಚಿವ ಉದಯ್‌ ಸಮಂತ್‌, ‘ಮಿಲಿಂದ್‌ ದಿಯೋರಾ ಅವರಿಗೆ ಸದಾ ಸ್ವಾಗತ. ಒಂದು ವೇಳೆ ಅವರು ಶಿಂದೆ ಅವರೊಂದಿಗೆ ಕೆಲಸ ಮಾಡಲು ಇಚ್ಚಿಸಿದ್ದೇ ಆದರೆ, ಅದು ಪಕ್ಷಕ್ಕೆ ಲಾಭ ಮಾಡಿಕೊಡಲಿದೆ’ ಎಂದು ಹೇಳಿದ್ದಾರೆ.  

ಮಿಲಿಂದ್‌ ದಿಯೋರಾ ಮುನಿಸಿಕೊಂಡಿದ್ದಾರೆ ಎಂಬ ವರದಿಗಳನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್‌ ವಾಡೆಟ್ಟಿವಾರ್‌ ತಳ್ಳಿಹಾಕಿದ್ದಾರೆ. ‘ಆ ರೀತಿ ಏನೂ ಇಲ್ಲ. ನಮ್ಮ ವಿರೋಧಿಗಳು ಇಂಥ ಸುದ್ದಿಗಳನ್ನು ಹರಡುತ್ತಿದ್ದಾರೆ‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT