ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

10 ಸಾವಿರ ಕಟ್ಟಡ ಕಾರ್ಮಿಕರ ನೇಮಕ: ಇಸ್ರೇಲ್‌ ಮತ್ತೆ ಮನವಿ

Published : 10 ಸೆಪ್ಟೆಂಬರ್ 2024, 19:46 IST
Last Updated : 10 ಸೆಪ್ಟೆಂಬರ್ 2024, 19:46 IST
ಫಾಲೋ ಮಾಡಿ
Comments

ಮುಂಬೈ: 10 ಸಾವಿರ ಕಟ್ಟಡ ನಿರ್ಮಾಣ ಕಾರ್ಮಿಕರ ಅಗತ್ಯವಿದ್ದು, ಮತ್ತೆ ನೇಮಕ ಪ್ರಕ್ರಿಯೆ ನಡೆಸಿಕೊಡುವಂತೆ ಭಾರತಕ್ಕೆ ಇಸ್ರೇಲ್‌ ಮನವಿ ಮಾಡಿದೆ. ಅಲ್ಲದೇ, ಮನೆ ಆರೈಕೆಗಾಗಿ 5 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಡುವಂತೆಯೂ ಕೋರಿದೆ.

ಇಸ್ರೇಲ್‌ ಮನವಿಗೆ ಸ್ಪಂದಿಸಿರುವ ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ), ಈ ಸಂಬಂಧ ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದೆ.

ಕಟ್ಟಡ ನಿರ್ಮಾಣ ಕಾರ್ಮಿಕರ ನೇಮಕ ಪ್ರಕ್ರಿಯೆ ಈ ಬಾರಿ ಮಹಾರಾಷ್ಟ್ರದಲ್ಲಿ ನಡೆಯಲಿದೆ. ಮೊದಲ ಸುತ್ತಿನ ನೇಮಕಾತಿ ಪ್ರಕ್ರಿಯೆ ಉತ್ತರ ಪ್ರದೇಶ, ಹರಿಯಾಣ ಮತ್ತು ತೆಲಂಗಾಣದಲ್ಲಿ ನಡೆದಿತ್ತು. ಆಗ, 10,349 ಕಾರ್ಮಿಕರು ನೇಮಕಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT