ಬೆಂಗಳೂರು: ಚತ್ತೀಸಗಡದಲ್ಲಿಸಂಪುಟ ಸಚಿವ ಮೊಹಮ್ಮದ್ ಅಕ್ಬರ್ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಮೊಳಗುವಾಗ ತ್ರಿವರ್ಣ ಧ್ವಜಕ್ಕೆ ವಂದಿಸದಿರುವ ವಿಡಿಯೊ ಇತ್ತೀಚೆಗೆ ವೈರಲ್ ಆಗಿತ್ತು. ದೇಶದ್ರೋಹಿ ಎಂಬ ಹಣೆಪಟ್ಟಿ ನೀಡಿ ನೆಟ್ಟಿಗರು ಅಕ್ಬರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಅಷ್ಟಕ್ಕೂ ರಾಷ್ಟ್ರಧ್ವಜಕ್ಕೆ ವಂದಿಸುವುದು ಕಡ್ಡಾಯವೇ? ಆ ಕುರಿತು ರಾಷ್ಟ್ರಧ್ವಜ ಸಂಹಿತೆ ಏನು ಹೇಳುತ್ತದೆ? ಇಲ್ಲಿದೆ ವಿವರ.

ತ್ರಿವರ್ಣ ಧ್ವಜ ನಮ್ಮೆದುರಿಗೆ ಹಾರುತ್ತಿದ್ದರೆ, ನಮಗೆ ತಿಳಿಯದಂತೆ ರಾಷ್ಟ್ರ ಭಕ್ತಿ ನಮ್ಮೊಳಗೆ ಜಾಗೃತವಾಗುತ್ತದೆ. ಆದರೆ, ಅದಕ್ಕಾಗಿ ರೂಪಿಸಿರುವ ನಿಯಮಗಳ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ.

ಇದನ್ನೂ ಓದಿ:ತಿರಂಗ ಧ್ವಜ ಬಳಸುವ ಕ್ರಮ

2002ಕ್ಕಿಂತ ಮೊದಲು ಕೇವಲ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವಕಾರ್ಯಕ್ರಮಗಳಲ್ಲಿ ಮಾತ್ರ ಧ್ವಜಾರೋಹಣ ಮಾಡಲು ಅನುಮತಿ ಇತ್ತು. ಗೃಹ ಸಚಿವಾಲಯಧ್ವಜ ಸಂಹಿತೆಯ ರೂಪಿಸಿದ ನಂತರ ಎಲ್ಲಾ ದಿನಗಳಲ್ಲಿಯೂ ರಾಷ್ಟ್ರಧ್ವಜ ಹಾರಿಸಲು ಸಾಧ್ಯವಾಯಿತು.

ಚತ್ತೀಸಗಡದಲ್ಲಿ ಗಣರಾಜ್ಯೋತ್ಸವದ ವೇಳೆ ಸಚಿವ ರಾಷ್ಟ್ರಧ್ವಜಕ್ಕೆ ನಮಿಸದಿರುವ ವಿಡಿಯೊವೊಂದನ್ನು ಸಮೀರ್ ಮಹೇಶ್ವರಿ ಎಂಬುವವರು ಟ್ವಿಟ್ಟರ್ನಲ್ಲಿ ಪ್ರಕಟಿಸಿ, ‘ಇವರು ಚತ್ತೀಸಗಡದ ಕಾಂಗ್ರೆಸ್ ಸಚಿವ ಮೊಹಮ್ಮದ್ ಅಕ್ಬರ್, ಇವರಿಗೆ ರಾಷ್ಟ್ರಧ್ವಜಕ್ಕೆ ವಂದಿಸಬೇಕು ಎಂಬುದೂ ತಿಳಿದಿಲ್ಲ’ ಎನ್ನುವ ಟಿಪ್ಪಣಿ ಬರೆದುಕೊಂಡಿದ್ದರು. ಈ ಟ್ವಿಟ್ ಅನ್ನು ಸಾವಿರಾರು ಮಂದಿ ಲೈಕ್ ಮಾಡಿದ್ದರು ಹಾಗೂ 900 ಮಂದಿ ಅದನ್ನು ಮರು ಟ್ವೀಟ್ ಮಾಡಿಕೊಂಡಿದ್ದರು.ಅಲ್ಲಿನ ಬಿಜೆಪಿ ನಾಯಕರು ಅಕ್ಬರ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು.

ಧ್ವಜ ಸಂಹಿತೆಯ ಪ್ರಕಾರ, ರಾಷ್ಟ್ರಧ್ವಜವನ್ನು ಹಾರಿಸುವಾಗ , ಇಳಿಸುವಾಗಅಥವಾ ಪರೇಡ್ ಹೋಗುತ್ತಿರುವಾಗ ಅಲ್ಲಿ ನೆರೆದಿರುವ ಜನರು ನೇರವಾಗಿ ನಿಂತು ಗೌರವ ನೀಡಬೇಕು. ಸಮವಸ್ತ್ರ ಧರಿಸಿದವರು ಕಡ್ಡಾಯವಾಗಿಸೆಲ್ಯೂಟ್ ಮಾಡಬೇಕು.

ಇವುಗಳ ಜೊತೆಗೆ ಧ್ವಜ ಸಂಹಿತೆಯಲ್ಲಿ ಇರುವ ಇನ್ನು ಕೆಲವು ಪ್ರಮುಖ ಅಂಶಗಳೆಂದರೆ:

* ಉಣ್ಣೆ, ಹತ್ತಿ, ರೇಷ್ಮೆ ಅಥವಾ ಖಾದಿಯನ್ನು ಕೈಯಿಂದ ನೇಯ್ದು ಧ್ವಜವನ್ನು ಮಾಡಬೇಕು. ಧ್ವಜ ಆಯತಾಕಾರವಾಗಿರಬೇಕು. ಅದರ ಉದ್ದ ಮತ್ತು ಅಗಲದ ಅನುಪಾತ 3: 2 ಆಗಿರಬೇಕು.

ಇದನ್ನೂ ಓದಿ:‘ರಾಷ್ಟ್ರಧ್ವಜ’ವೇ ಎಲ್ಲ; ಲಾಭ ಲೆಕ್ಕಾಚಾರ ಇಲ್ಲಿಲ್ಲ!

* ಧ್ವಜವನ್ನು ಯಾವುದೇ ಕಾರಣಕ್ಕೂ ನೆಲದ ಮೇಲಿಡಬಾರದು. ಸರ್ಕಾರದ ಆದೇಶವಿದ್ದಾಗ ಮಾತ್ರ ಧ್ವಜವನ್ನುಅರ್ಧಕ್ಕೆ ಹಾರಿಸಲಾಗುತ್ತದೆ. ಕೇಸರಿ ಬಣ್ಣದ ಪಟ್ಟಿಯನ್ನು ಕೆಳಕ್ಕೆ ಮಾಡಿ ಧ್ವಜಾರೋಹಣ ಮಾಡಬಾರದು.

*ಹಾನಿಯಾದಧ್ವಜವನ್ನು ಹಾರಿಸಬಾರದು. ಧ್ವಜಕ್ಕೆ ಹಾನಿಯುಂಟು ಮಾಡಿದರೆ ಅಥವಾ ಮೌಖಿಕವಾಗಿ, ಲಿಖಿತವಾಗಿ ನಿಂದಿಸಿದರೆ ಮೂರು ವರ್ಷ ಜೈಲು ಶಿಕ್ಷೆ/ ದಂಡ ಅಥವಾ ಎರಡನ್ನು ವಿಧಿಸಬಹುದು.

ಇದನ್ನೂ ಓದಿ:ಅಮಿತ್ ಶಾ ಎಡವಟ್ಟಿನಿಂದ ಕೆಳಬಿದ್ದ ರಾಷ್ಟ್ರಧ್ವಜ

* ತ್ರಿವರ್ಣ ಧ್ವಜದಿಂದ ಮಾಡಲಾದ ಸಮವಸ್ತ್ರವನ್ನು ಧರಿಸುವುದು ನಿಷಿದ್ಧ. ಸೊಂಟದ ಕೆಳಗೆ ತ್ರಿವರ್ಣಧ್ವಜದ ಬಟ್ಟೆಯನ್ನು ಧರಿಸುವುದು ಕೂಡ ಧ್ವಜಕ್ಕೆ ಮಾಡುವ ಅಪಮಾನವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.