ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಬಿಪಿ: ಗ್ರೂಪ್‌ ಸಿ ಸಿಬ್ಬಂದಿಗೆ ಇದೇ ಮೊದಲ ಬಾರಿಗೆ ಬಡ್ತಿ ಸೌಲಭ್ಯ

Published 27 ಜೂನ್ 2023, 15:38 IST
Last Updated 27 ಜೂನ್ 2023, 15:38 IST
ಅಕ್ಷರ ಗಾತ್ರ

ನವದೆಹಲಿ: ಭಾರತ–ಟಿಬೆಟ್ ಗಡಿ ಪೊಲೀಸ್‌ನ (ಐಟಿಬಿಪಿ) ಅಡುಗೆಯವರು, ನೀರು ಪೂರೈಕೆದಾರರು, ಕ್ಷೌರಿಕರು, ಕಸಗುಡಿಸುವ ಕೆಲಸದ ಸಿಬ್ಬಂದಿಗೆ ಸುದೀರ್ಘ ಅವಧಿಯ ನಂತರ ಇದೇ ಮೊದಲ ಬಾರಿಗೆ ಬಡ್ತಿಯು ಸಿಗಲಿದೆ.

ಅಧಿಕೃತ ಮೂಲಗಳ ಪ್ರಕಾರ, ಕೇಂದ್ರ ಸರ್ಕಾರ ಕಳೆದ ವಾರ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ. ಈ ಪ್ರಕಾರ, 984 ಹೆಡ್‌ ಕಾನ್‌ಸ್ಟೆಬಲ್‌ ಹುದ್ದೆಗಳು ಸೃಷ್ಟಿಯಾಗಲಿವೆ.

ಇಂಡೊ ಟಿಬೆಟ್‌ ಗಡಿ ಪೊಲೀಸ್‌ನ (ಐಟಿಬಿಪಿ) ಈ ವರ್ಗದಲ್ಲಿ ಎಂಟು ವಿವಿಧ ಕಾರ್ಯಗಳಲ್ಲಿ ನಿರತರಾದ ಸಿಬ್ಬಂದಿ ಇದ್ದಾರೆ. ಇವರ ಒಟ್ಟು ಸಂಖ್ಯೆ 7,097. ಹುದ್ದೆಗಳ ಪರಿಷ್ಕರಣೆಯ ನಂತರವೂ ಸಿಬ್ಬಂದಿಯ ಒಟ್ಟು ಸಂಖ್ಯೆಯಲ್ಲಿ ಬದಲಾವಣೆ ಆಗುವುದಿಲ್ಲ.

ಈ ವರ್ಗದಲ್ಲಿ ಕಾನ್‌ಸ್ಟೆಬಲ್‌ ಆಗಿ ಸೇವೆಗೆ ಸೇರಿದರೆ 35–40 ವರ್ಷಗಳ ಸೇವಾವಧಿ ಬಳಿಕವು ಅದೇ ಹುದ್ದೆಯಲ್ಲಿ ನಿವೃತ್ತರಾಗು
ತ್ತಿದ್ದರು. ಈ ವರ್ಗದ ಸಿಬ್ಬಂದಿ ಮಾನಸಿಕ ಸ್ಥೈರ್ಯ ಹೆಚ್ಚಿಸುವುದು ಈ ನಿರ್ಧಾರದ ಉದ್ದೇಶ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT