ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಕಚೇರಿ ನಾಮಫಲಕದಲ್ಲಿ ತಾಯಿ ಹೆಸರು ಸೇರಿಸಿದ ಶಿಂದೆ

Published 13 ಮಾರ್ಚ್ 2024, 15:45 IST
Last Updated 13 ಮಾರ್ಚ್ 2024, 15:45 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ರಾಜ್ಯ ಸಚಿವಾಲಯದಲ್ಲಿರುವ ಕಚೇರಿ ಹೊರಗಿನ ನಾಮಫಲಕದಲ್ಲಿ ತಮ್ಮ ಹೆಸರಿನ ಜೊತೆಗೆ ತಾಯಿಯ ಹೆಸರನ್ನೂ ಸೇರಿಸಿದ್ದಾರೆ.

ಈ ಹಿಂದೆ ಅವರು ನಾಮಫಲಕದಲ್ಲಿ ತಮ್ಮ ಹೆಸರಿನ ಜೊತೆಗೆ ತಂದೆಯ ಹೆಸರನ್ನು ಸೇರಿಸಿದ್ದರು.

‘ಏಕನಾಥ ಗಂಗೂಬಾಯಿ ಸಂಬಾಜಿ ಶಿಂದೆ’ ಎಂದು ಹೊಸ ನಾಮಫಲಕ ಹಾಕಲಾಗಿದೆ.

2024ರ ಮೇ 1ರ ನಂತರ ಹುಟ್ಟುವ ಮಕ್ಕಳ ಆಧಾರ್‌, ಪ್ಯಾನ್‌ನಂತಹ ಸರ್ಕಾರಿ ದಾಖಲೆಗಳಲ್ಲಿ ಕಡ್ಡಾಯವಾಗಿ ತಾಯಿಯ ಹೆಸರನ್ನು ನಮೂದಿಸಬೇಕು ಎಂದು ಈಚೆಗೆ ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಂಡಿತ್ತು. ಈ ಕಾರಣಕ್ಕೆ ಶಿಂದೆ ಅವರು ತಮ್ಮ ಹೆಸರಿನ ಜೊತೆಗೆ ತಾಯಿಯ ಹೆಸರನ್ನು ಸೇರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT